ಹಾವೇರಿ 86ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಫ್ರೊ. ದೊಡ್ಡರಂಗೇಗೌಡ ಆಯ್ಕೆ

ತುಮಕೂರು: ಹಾವೇರಿಯಲ್ಲಿ ಮುಂದಿನ ತಿಂಗಳು ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ದೊಡ್ಡ ರಂಗೇ ಗೌಡರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಈ ವಿಷಯ ತಿಳಿಸಿದ್ದಾರೆ. ಅಧ್ಯಕ್ಷರ ಆಯ್ಕೆಗೆ ಅಂತಿಮ ಪಟ್ಟಿಯಲ್ಲಿ ನಾಲ್ಕೈದು ಜನ ಹಿರಿಯ ಸಾಹಿತಿಗಳ ಹೆಸರು ಗಳಿದ್ದವು. ಅಂತಿಮವಾಗಿ ದೊಡ್ಡ ರಂಗೇಗೌಡರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬಹಳ್ಳಿಯ ಗೌಡರ ಆಯ್ಕೆಯನ್ನು ಜಿಲ್ಲೆಯ ಸಾಂಸ್ಕೃತಿಕ ಲೋಕ ಸ್ವಾಗತಿಸಿದೆ.

Leave a Reply

Your email address will not be published. Required fields are marked *