ಬನ್ನಿಗೋಳ ಗ್ರಾಮದಲ್ಲಿ ಶಾರದಾ ಕೊಪ್ಪಳ ಅವರಿಗೆ ಸನ್ಮಾನ

ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಶನಿವಾರ ಜರುಗಿದ “ನಮ್ಮೂರ ಹೆಮ್ಮೆ” (ಸಾಧನೆ ನಿಮ್ಮದು ಅಭಿಮಾನ ನಮ್ಮದು)ಸನ್ಮಾನ‌ ಕಾರ್ಯಕ್ರಮದಲ್ಲಿ ಗ್ರಾಮದ ಸಾಧಕರನ್ನು ಗಣ್ಯರು ಸತ್ಕರಿಸಿ ಗೌರವಿಸಿದ್ದರು.
ಇದೇ ಸಂದರ್ಭದಲ್ಲಿ ವಲ್ಲಾಭಪುರ ಮೊರಾರ್ಜಿ ದೇಸಾಯಿ ಶಾಲೆಯ ಸಂಗೀತ ಶಿಕ್ಷಕಿ, ಪ್ರತಿಭಾವಂತ ಗಾಯಕಿ ಶಾರದ ಕೊಪ್ಪಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತರೂ ಆದ ಬಿ.‌ಮಂಜಮ್ಮ ಜೋಗತಿ, ಹಿರಿಯ ರಂಗ ಕಲಾವಿದೆ ಡಾ. ಕೆ.ನಾಗರತ್ನಮ್ಮ, ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *