ಸಾಮಾಜಿಕ ನ್ಯಾಯದ ಹರಿಕಾರ

ಕಡು ಬಡವರ ಬದುಕಿನೊಳು
ನವ ಆಶಾಕಿರಣ ಮೂಡಿಸಿ
ಸಮಾಜದಂಚಿನ ವ್ಯಕ್ತಿಗೂ
ಮಾತೃ ಅನುಕಂಪ ತೋರಿಸಿ
ಕನಸು ಮನಸಿನಲಿ ನೆನಸದ
ಅಧಿಕಾರದ ಗದ್ದುಗೆಗೇರಿಸಿ
ನವ ಸಮಾಜ ನಿರ್ಮಾಣಕೆ
ಭದ್ರಬುನಾದಿ ಹಾಕಿದ ಮುತ್ಸದಿ!
ಬಡ ಗೇಣಿದಾರರಿಗೆ
ಭಾಗ್ಯದ ಬಾಗಿಲು ತೆರೆದು
ಸ್ವತಂತ್ರ,ಸ್ವಾಭಿಮಾನ ಬದುಕು
ನಡೆಸಲು ಜೀತ ಮುಕ್ತಗೊಳಿಸಿ
ಮೈಸೂರು ರಾಜ್ಯಕೆ ‘ಕರ್ನಾಟಕ’ವೆಂದು
ಮರು ನಾಮಕರಣಗೊಳಿಸಿ
ಜನಪರ ಕಾಯ್ದೆಗಳು ಜಾರಿಗೆ ತಂದು
ಸದಾ ಜನರ ಹೃದಯ ನೆಲೆವಾಸಿ!!
ಸಾಮಾಜಿಕ ನ್ಯಾಯದ ಹರಿಕಾರ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು
ಜನ್ಮದಿನದ ಈ ಶುಭ ದಿನದಂದು
ಪ್ರೀತಿ ಗೌರವದಿ ಅವರಿಗೆ ನಮಿಸೋಣ!

-ಗೋಸಿಂಹಾ, ಹೊಸಪೇಟೆ
