ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹ ಬೊ ಹಳ್ಳಿಯಲ್ಲಿ ಅಧ್ಯಾಪಕಿಯರ ಕ್ರೀಡಾಕೂಟ

ಹಗರಿಬೊಮ್ಮನಹಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜ್ ಕ್ರೀಡಾ ಮೈದಾನದಲ್ಲಿ ಮಹಿಳಾ ಶಿಕ್ಷಕರಿಗಾಗಿ ಗುರುವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು.
ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಶರಣಮ್ಮ ಅವರು ಕ್ರೀಡಾಕೂಟ ಉದ್ಘಾಟಿಸಿದರು.
ಗುಂಡು ಎಸೆತ, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.
ಗುಂಡು ಎಸೆತ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಅಧ್ಯಾಪಕಿ ಶಾಹೀರಾ ಬಾನು, ಎರಡನೇಯ ಸ್ಥಾನವನ್ನು ಶಾರದ ಕೊಪ್ಪಳ ಹಾಗೂ ಮೂರನೇ ಸ್ಥಾನವನ್ನು ವೀಣಾ ಅವರು ಪಡೆದರು.
ವಿಜೇತರಿಗೆ ಮಾ. 8ರಂದು ನಡೆಯುವ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು.
ಕ್ರೀಡಾಕೂಟದಲ್ಲಿ ಬಿಇಓ ಶೇಖರಪ್ಪ ಹೊರಪೇಟೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *