ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ತಲೈವಾ ರಜನಿಕಾಂತ್ ಅವರಿಗೆ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರಕಾರ ಪ್ರತಿವರ್ಷ ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಸೇವೆ ಸಲ್ಲಿಸಿದ ಹಿರಿಯ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಕನ್ನಡಿಗ ರಜನಿಕಾಂತ್ ಚಿತ್ರರಂಗದಲ್ಲಿ ಬೆಳೆದ ಹಾದಿ ಹೂವಿನ ಹಾಸಿಗೆಯಲ್ಲ; ಆದರೆ ಅವರು ಏರದ ಎತ್ತರವಿಲ್ಲ..
ಬೆಂಗಳೂರಿನ ಬಿಟಿಎಸ್ ಬಸ್ ನಲ್ಲಿ ಟಿಕೆಟ್ ಹರಿಯುತ್ತಿದ್ದ ಹುಡುಗ ಈ ಸಾಧನೆ ಮೆಟ್ಟಿಲು ಏರಿದ್ದು ಕನ್ನಡಿಗರಾದ ನಮಗೆ ಖುಷಿಯ ವಿಷಯ ಎಂದು ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸ್ನೇಹಪ್ರಿಯ ನಾಗರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಚಿತ್ರರಂಗ ಧೃವತಾರೆ, ನಟಸಾರ್ವ ಭೌಮ ಡಾ. ರಾಜಕುಮಾರ ಅವರೂ ಕೂಡಾ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

One thought on “ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Leave a Reply

Your email address will not be published. Required fields are marked *