ಪಾಲಿಕೆ ಚುನಾವಣೆ: ಸಿ.ಇಬ್ರಾಹಿಂ ನಾಮಪತ್ರ ಸಲ್ಲಿಕೆ

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ 13 ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿ ಸಿ ಇಬ್ರಾಹಿಂ (ಬಾಬು) ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಬಿಜೆಪಿ ಜಿಲ್ಲಾ ಮುಖಂಡ ಮುರಹರಗೌಡ ಹಾಗೂ ಉದ್ಯಮಿ ಮಾರುತಿ ಹಾಜರಿದ್ದರು. ನಾಮಪತ್ರ ಸಲ್ಲಿಕೆಗೂ ಮುನ್ನ ಇಬ್ರಾಹಿಂ (ಬಾಬು) ಅವರು ಸಂಗಮ್ ವೃತ್ತದ ಬಳಿಯ ಹಜರತ್ ಮಗ್ದುಮ್ ಜಾನಿ ದರ್ಗಾಗೆ ಭೇಟಿ ನೀಡಿ ನಂತರ ನಾಮಪತ್ರ ಸಲ್ಲಿಸಿದರು.
*****

Leave a Reply

Your email address will not be published. Required fields are marked *