ನೂತನ‌ ವಿಜಯನಗರ ಜಿಲ್ಲೆ: ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕ

ವಿಜಯನಗರ(ಹೊಸಪೇಟೆ), ಅ.18: ಕರ್ನಾಟಕ ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ನೂತನ ವಿಜಯನಗರ ಜಿಲ್ಲೆಯ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕವಾಗಿದ್ದಾರೆ.
ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಕಚೇರಿ ಅಧೀಕ್ಷರಾಗಿರುವ ಜಿ. ಶಿವಕುಮಾರ ಅವರನ್ನು ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ನೇಮಿಸಿದ್ದಾರೆ.
ಆದೇಶ ನೇಮಕ ಪತ್ರಕ್ಕೆ ರಾಜಾಧ್ಯಕ್ಷರ ಜತೆ ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್. ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಸ್. ವಿಜಯಕುಮಾರ್ ಅವರು ಸಹಿ ಹಾಕಿದ್ದಾರೆ.
ಈ ಕುರಿತಂತೆ ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಶಿವಕುಮಾರ್, ಶೀಘ್ರ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಹೊಸಪೇಟೆಯಲ್ಲಿ ಸದಸ್ಯರ ಸಭೆ ಕರೆಯಲಾಗುವುದು. ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಸಮಿತಿ ರಚಿಸಲಾಗುವುದು.
ಸಭೆಯಲ್ಲಿ ರಾಜ್ಯಾಧ್ಯಕ್ಷರು ಸೇರಿದಂತೆ ಹಿರಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

*****

Leave a Reply

Your email address will not be published. Required fields are marked *