ಅನುದಿನ ಕವನ-೩೦೬, ಕವಿ: ಪಿ.ಬಿ ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ದೀಪಾವಳಿ

ದೀಪಾವಳಿ

ಕಂದನ ವದನದಲಿ
ಶ್ರಮಿಕನ ಸಾಧನೆಯಲಿ
ಕಲಿಕನ ಅಧ್ಯಯನದಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

ತಾಯಿಯ ಪ್ರೀತಿಯಲ್ಲಿ
ತಂದೆಯ ನೀತಿಯಲ್ಲಿ
ಬಂಧುಗಳ ಸಾಥಿನಲ್ಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

ವೀಣೆಯ ರಾಗದಲ್ಲಿ
ಭಾನುವಿನ ಯೋಗದಲ್ಲಿ
ತನುವಿನ ಉಗಮದಲ್ಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

ವೈದ್ಯನ ಹೃದಯದಲಿ
ಬುದ್ಧನ ಮೆದುಳಿನಲಿ
ಸಿದ್ಧಿಪುರುಷರ ಪಾದದಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

ಅಂಗಳದ ದೀಪದಲ್ಲಿ
ತಿಂಗಳನ ತಾಪದಲ್ಲಿ
ಮಂಗಳಮಯ ಜಂಗಮನಲ್ಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

ಹೆಂಡತಿಯ ದಂತದಲ್ಲಿ
ಪಂಡಿತನ ಪಂಥದಲ್ಲಿ
ಖಂಡಿತನ ನಂಬುಗೆಯಲ್ಲಿ
ಕಂಡೆ ನಾ ಚೆಂಬೆಳಕಿನ ದೀಪಾವಳಿ

-ಪಿ.ಬಿ ಕೋಟೂರ, ಬೆಂಗಳೂರು
*****

Leave a Reply

Your email address will not be published. Required fields are marked *