Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೪೬೩, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ನನ್ನ ಜನಗಳು - Karnataka Kahale

ಅನುದಿನ ಕವನ-೪೬೩, ಕವಿ: ಡಾ. ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ನನ್ನ ಜನಗಳು

ನನ್ನ ಜನಗಳು

ಮುಗಿಲಿಗೆ ಹೆಗಲ ಕೊಟ್ಟವರು
ಮುಗಿಯದ ಕಥೆಯ ಕರ್ತೃಗಳು
ಮೂಡಣ ಹಾದಿಯ ಕೆಂಪುಗಳು
ನನ್ನ ಜನಗಳು ಚೋಮನ ಕುಡಿಗಳು

ಕತ್ತಲ ನಾಡಿನ ದನಿಗಳು
ಬೆಟ್ಟಕೆ ಬೆವರು ಇಳಿಸಿದವರು
ಹಸಿವನು ಹೆತ್ತ ಮನಸುಗಳು
ನನ್ನ ಜನಗಳು ಚೋಮನ ಕುಡಿಗಳು

ಸಾಕವ್ವನ ಒಡಲಿನ ನೋವುಗಳು
ಮಿಂಗೇಲರ ತೋಟದ ಹೂಗಳು
ಕಾಟಕೆ ಕೂಟಕೆ ನೊಂದವರು
ನನ್ನ ಜನಗಳು ಚೋಮನ ಕುಡಿಗಳು

ನೆಲವ ಉತ್ತಿ-ಬಿತ್ತಿ ಬೆಳೆದರೂ
ಮಣ್ಕಾಳಿಗೆ ಕೈ ಒಡ್ಡುವರು
ಗುಡುಗು-ಸಿಡಿಲಿಗೆ ಬಾಯೊಡ್ಡಿದವರು
ನನ್ನ ಜನಗಳು ಚೋಮನ ಕುಡಿಗಳು

ಹೆಸರು ಹೇಳಿಕೊಳ್ಳಲೂ ಬಯಸದವರು
ಕತ್ತಲಲ್ಲಿ ಕತ್ತಲಾಗಿ ಇದ್ದವರು
ಯಾರವರು ಯಾರವರು ಯಾರವರು
ನನ್ನ ಜನಗಳು ಚೋಮನ ಮಕ್ಕಳು

-ಡಾ. ಸದಾಶಿವ ದೊಡಮನಿ, ಇಳಕಲ್
*****