ಮರಿಯಮ್ಮನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಒಂದೇ ಕುಟುಂಬದ ನಾಲ್ವರ ದುರಂತ ಸಾವು

ಹೊಸಪೇಟೆ, ಏ.8: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಎ ಸಿ ಅನಿಲ ಸೋರಿಕೆಯ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಪಟ್ಟಣದ ವೆಂಕಟ್ ಪ್ರಶಾಂತ್(42), ಇವರ ಪತ್ನಿ ಚಂದ್ರಕಲಾ(38), ಮಕ್ಕಳಾದ ಆರ್ದ್ವಿಕ್(16), ಪ್ರೇರಣಾ(14) ಮೃತಪಟ್ಟವರು.
ವೆಂಕಟ ಪ್ರಶಾಂತ್ ಪಟ್ಟಣದ ಹಿರಿಯ ಮುಖಂಡ ರಾಘವೇಂದ್ರ ಶೆಟ್ಟಿ ಹಾಗೂ ಶ್ರೀಮತಿ ರಾಜಶ್ರೀ ದಂಪತಿಗಳ ಪುತ್ರ.
ಶಾಸಕ ಭೀಮನಾಯ್ಕ ಸಂತಾಪ: ಆಕಸ್ಮಿಕ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ವೆಂಕಟ ಪ್ರಶಾಂತ್ ಮತ್ತು ಮೂವರಿಗೆ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮನಾಯ್ಕ ಅವರು ಸಂತಾಪ ಸೂಚಿಸಿದ್ದಾರೆ.
ಬಾಳಿ ಬದುಕ ಬೇಕಾದ ಸುಂದರ ಕುಟುಂಬವೊಂದು ದುರಂತ ಸಾವಿಗೆ ಸಾಕ್ಷಿಯಾಗಿದ್ದು, ದೇವರು ಮನಸ್ಸು ಇಷ್ಟೊಂದು ಕಲ್ಲಾಯಿತೇ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಇಂತಹ ದುರ್ಘಟನೆಯ ನೋವನ್ನು ಸಹಿಸಿಕೊಳ್ಳುವುದು ಅಸಾಧ್ಯವೆನಿಸಿದರೂ, ವಿಧಿಯ ಬರಹಕ್ಕೆ ನಾವುಗಳೆಲ್ಲಾ ಮೂಕ ಪ್ರೇಕ್ಷಕರು. ಈ ಸಂದರ್ಭದಲ್ಲಿ ಭಗವಂತ ಹಿರಿಯರಾದ ರಾಘವೇಂದ್ರ ಶೆಟ್ಟಿ ಹಾಗೂ ಶ್ರೀಮತಿ ರಾಜಶ್ರೀ ದಂಪತಿಗಳಿಗೆ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
*****

Leave a Reply

Your email address will not be published. Required fields are marked *