ಅನುದಿನ ಕವನ-೬೨೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಗೆಳೆತನ

ಗೆಳೆತನ

ನಮ್ಮೊಳಗಿರುವ
ಭಾವನೆಗಳು ನಮ್ಮದು
ಮನಸ್ಸು ಬಲು ಮೃದು
ಬಯಸುವ ಗೆಳೆತನ
ಉಳಿಸಿಕೊಂಡು ತೋರಬೇಕು
ನಮ್ಮತನ
ನಮ್ಮಂತೆ ಇತರರೂ ಎಂದು
ಭಾವಿಸುವುದು ಮೂರ್ಖತನ
ಕೆಲವರಿರುವರು
ಮೊದಲು ತೋರುವರು ಪ್ರೀತಿ ಆದರ
ಅವರದೋ ಮುತ್ತುದುರಿಸುವಂತಹ ಅದರ !
ಉಕ್ಕಿ ಬರುವ ಹೊಸತನ
ಮೋಡಿ ಮಾಡುವ ಜಾಣತನ
ನಗು ಮೊಗದಲ್ಲೇ ಮಾತಿನ ಸವಿನುಡಿ
ತಮ್ಮ ಕಾರ್ಯ ಮುಗಿಯುವವರೆಗೂ
ಸಭ್ಯತೆಯ ಸೋಗಿನಲ್ಲಿ
ಮೆತ್ತನೆಯ ನಡೆ – ನುಡಿ
ಮನೆ ಕಟ್ಟುವ, ರೈಲು ಬಿಡುವ ಕರಗತ !!
ನಂಬಿಸುವಾಗ ಅಮಾಯಕರು
ನಂಬಿದ ಮೇಲೆ ವ್ಯಾಘ್ರರು
ಧನದಾಹಿ ದಾಸರು
ಹಣದೋಚುವ ಖದೀಮರು
ಕೆಲವರು
ಅಂತವರನ್ನು ನಂಬದಿರು
ಕಷ್ಟಕ್ಕೆ ಕೈ ಹಿಡಿಯುವ
‌‌‌ ಇಷ್ಟದಿಂದ ನಡೆಯುವ
ಕೊನೆಯವರೆಗೂ ಕಾಯುವ
ಕೆಲವೇ ಕೆಲವು ಸ್ನೇಹಿತರು
ಇರಲಿ ನಿರಂತರ
‌‌‌ ಸಾವಿರದ ಗೆಳೆತನ


-ಶೋಭಾ ಮಲ್ಕಿ ಒಡೆಯರ್🖊️
ಹೂವಿನ ಹಡಗಲಿ
*****

Leave a Reply

Your email address will not be published. Required fields are marked *