ಪರಿಸರ ಪ್ರೇಮಿ ಸಂಜಯ್ ಹೊಯ್ಸಳ ಅವರ ಪರಿಸರದ ಕುರಿತು ಜಾಗೃತಿ ಉಂಟುಮಾಡುವ ‘ನಾನು ಪ್ಲಾಸ್ಟಿಕ್’ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇 ನಾನು ಪ್ಲಾಸ್ಟಿಕ್ (ಪರಿಸರ ಕವನ) ಸುಟ್ಟರೆ ವಿಷಗಾಳಿಯಾದೆ ಆಸ್ತಮಾ,ಕ್ಯಾನ್ಸರ್ ತರುವೆ, ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ,…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಮರ್ಚೇಡ್ ಮಲ್ಲಿಕಾರ್ಜುನಗೌಡರಿಗೆ ಧಾರವಾಡ ವಿವಿಯಿಂದ ಪಿಹೆಚ್‌ಡಿ ಪದವಿ
ಬಳ್ಳಾರಿ: ನಗರದ ಯುವ ಉದ್ಯಮಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಪಿಹೆಚ್‌ಡಿ ಪದವಿ ಘೋಷಿಸಿದೆ. ಅವರು ಸಮಾಜ ವಿಜ್ಞಾನ ನಿಕಾಯದ ಮಾನವ ಶಾಸ್ತ್ರ ವಿಭಾಗದಲ್ಲಿ ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ವಿ.ಜಗದೀಶ್ ಅವರ ಮಾರ್ಗದರ್ಶನದಲ್ಲಿ…
ಬೀದರನಲ್ಲಿ ಮಿಂಚಿದ ಬಳ್ಳಾರಿಗರ ದನ ಕಾಯೋರ ದೊಡ್ಡಾಟ: ‘ಬಳ್ಳಾರಿ ಕಲಾವಿದರ ಅಭಿನಯಕ್ಕೆ ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು”
ಬಳ್ಳಾರಿ:ಕರ್ನಾಟಕದ ಮುಕುಟ, ಐತಿಹಾಸಿಕ ನಗರ ಬೀದರ್ ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ರಾಜ್ಯ ಮಟ್ಟದ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಬಳ್ಳಾರಿಯ ಕಲಾವಿದರು ಅಭಿನಯಿಸಿದ ದನ ಕಾಯುವವರ ದೊಡ್ಡಾಟಕ್ಕೆ ಕಲಾಸಕ್ತರು ಫಿದಾ ಆದರು. ಬೀದರಿನ ಜನಪದ ಕಲಾವಿದರ ಬಳಗ, ಅಖಿಲ ಭಾರತ ಕಲಾವಿದರ…
ಪ್ರಾ.ಶಾ ಶಿಕ್ಷಕರಿಗೆ ಹಳೆ ಪಿಂಚಣಿ ಸೌಲಭ್ಯ ಕಲ್ಪಿಸಲು ಕರಾಸಪ್ರಾ ಶಾಲಾ ಶಿಕ್ಷಕರ ಸಂಘ ಒತ್ತಾಯ
ಬಳ್ಳಾರಿ: 2005 ರ ನೇಮಕಾತಿ ಅಧಿಸೂಚನೆ ಅನ್ವಯ 2007 ಜನವರಿಯಲ್ಲಿ ನೇಮಕಾತಿಗೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಕರಾಸಪ್ರಾಶಾ ಶಿಕ್ಷಕರ ಸಂಘ ಡಿಡಿಪಿಐ ಅವರನ್ನು ಒತ್ತಾಯಿಸಿದೆ. ಈ ಕುರಿತು ಕರಾಸಪ್ರಾಶಾ ಶಿಕ್ಷಕರ ಸಂಘದ ಅವಿಭಜಿತ ಬಳ್ಳಾರಿ ಜಿಲ್ಲಾಧ್ಯಕ್ಷ…
ವಾರ್ತಾ ಇಲಾಖೆ ಪ್ರಶಿಕ್ಷಣಾರ್ಥಿ, ಗ್ರಾಮೀಣ ಪ್ರತಿಭೆ ಮೈಲಾರಿಗೆ ರಾಜ್ಯಪಾಲರಿಂದ ಚಿನ್ನದ ಪದಕ ಪ್ರದಾನ
ಬಳ್ಳಾರಿ: ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಎಂ.ಎಸ್.ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಮೈಲಾರಿ ಲಿಂಗಪ್ಪ ವೈ ಪ್ರಥಮ ಶ್ರೇಣಿ (Rank) ಪಡೆದ ಹಿನ್ನಲೆಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕ ನೀಡಿ ಗೌರವಿಸಿದರು. ತುಮಕೂರು…
ಅನುದಿನ ಕವನ-೬೫ (ಪ್ರಸಿದ್ಧ ಕವಿ: ಪ್ರೊ. ಎನ್.ಎಸ್. ಲಕ್ಷೀನಾರಾಯಣ ಭಟ್ಟ) ಜನಪ್ರಿಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ
ಜನ ಮಾನಸದಲ್ಲಿ ಉಳಿಯುವ ನೂರಾರು ಭಾವ ಗೀತೆಗಳು, ಶಿಶು ಗೀತೆಗಳನ್ನು ರಚಿಸಿದ ಜನಾನುರಾಗಿ ಕವಿ ಪ್ರೊ. ಎನ್. ಎಸ್ ಲಕ್ಷೀನಾರಾಯಣ ಭಟ್ಟರು ತಮ್ಮ 85ನೇ ವಯಸ್ಸಿನಲ್ಲಿ ಇಂದು(ಮಾ.6) ಬೆಳಿಗ್ಗೆ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಅನುವಾದ ಕ್ಷೇತ್ರದಲ್ಲೂ ಅನುಪಮಸೇವೆ ಸಲ್ಲಿಸಿದ ಇವರಿಗೆ ರಾಜ್ಯೋತ್ಸವ…
ಅನುದಿನ ಕವನ-೬೪ (ಕವಿ: ಎನ್. ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ: ಕೆಂಡಸಂಪಿಗೆ)
ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ…
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹ ಬೊ ಹಳ್ಳಿಯಲ್ಲಿ ಅಧ್ಯಾಪಕಿಯರ ಕ್ರೀಡಾಕೂಟ
ಹಗರಿಬೊಮ್ಮನಹಳ್ಳಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಜ್ಯೂನಿಯರ್ ಕಾಲೇಜ್ ಕ್ರೀಡಾ ಮೈದಾನದಲ್ಲಿ ಮಹಿಳಾ ಶಿಕ್ಷಕರಿಗಾಗಿ ಗುರುವಾರ ಕ್ರೀಡಾಕೂಟ ಆಯೋಜಿಸಲಾಗಿತ್ತು. ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಶರಣಮ್ಮ ಅವರು ಕ್ರೀಡಾಕೂಟ ಉದ್ಘಾಟಿಸಿದರು. ಗುಂಡು ಎಸೆತ, ಮ್ಯೂಸಿಕಲ್ ಚೇರ್, ಕ್ರಿಕೆಟ್ ಸೇರಿದಂತೆ…
ಸಾರ್ವಜನಿಕ ಸುರಕ್ಷತಾ ಕಾಯ್ದೆ-2017: 550 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ -ಎಸ್ಪಿ ಸೈದುಲು ಅಡಾವತ್
ಬಳ್ಳಾರಿ: ನಾಗರಿಕರ ಹಿತರಕ್ಷಣೆಗಾಗಿ ಸಾರ್ವಜನಿಕ ಸುರಕ್ಷತಾ ಕಾಯ್ದೆ-2017 ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಹೇಳಿದರು. ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ-2017…
ಧಾರವಾಡದ ಗಣಕರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ: “ಸಂವಿಧಾನ ಮತ್ತು ಮಹಿಳೆ” ಕುರಿತ ಲೇಖನ ಸ್ಪರ್ಧೆ
ಧಾರವಾಡ: ಧಾರವಾಡದ ಗಣಕರಂಗ ಸಂಸ್ಥೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಸಂವಿಧಾನ ಮತ್ತು ಮಹಿಳೆ” ವಿಷಯದ ಕುರಿತ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. ಧಾರವಾಡದ ಗಣಕರಂಗ ಸಂಸ್ಥೆಯ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ಅವರ ಸಹಕಾರದೊಂದಿಗೆ, ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತ, ಕವಿ…
