ಅಜ್ಜಿ ನೆನಪು ಮಾಡಿಕೊಳ್ಳುತ್ತಿರುತ್ತೇನೆ ನನ್ನ ಅಜ್ಜಿಯನ್ನು. ಅಜ್ಜಿ ತೀರಿಹೋಗಿ ಅದೆಷ್ಟೋ ವರ್ಷಗಳಾದವು; ನಾವೆಲ್ಲ ಅಜ್ಜಿಯನ್ನು ಅವ್ವ ಎಂದು ಕರೆಯುತ್ತಿದ್ದೆವು. ಹಾಗೆ ಕರೆಯುವುದಕ್ಕೆ ಬೇರೊಂದು ಕಥೆಯೇ ಇದೆ. ಅದೆಲ್ಲ ಇರಲಿ; ಇನ್ನೊಮ್ಮೆ ಹೇಳುವೆ, ಅದೊಂದು ನೀಳ್ಗಥೆ. ಯಾಕೆ ಅಜ್ಜಿ ಆಗೀಗ ನೆನಪಾಗುತ್ತಾಳೆಂದು ಕೇಳಿಕೊಳ್ಳುತ್ತೇನಾದರೂ…
Category: ಅನುದಿನ ಕವನ
ಅನುದಿನ ಕವನ-೧೧೫೩, ಹಿರಿಯ ಕವಿ: ಆರ್ ಜಿ ಹಳ್ಳಿ ನಾಗರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅಜ್ಜ
ಅಜ್ಜ, ನಮಸ್ಕಾರ. ಅವಮಾನದಲ್ಲೂ ನೋವುಂಡು ನಕ್ಕ ನೀನು ಶುದ್ಧ, ಪರಿಶುದ್ಧ. ಬೆವರ ಹನಿಯ ದೇಶದ ಜೀವನಾಡಿ. ನೇಗಿಲಯೋಗಿ. “ಕೊಳಕು ಬಟ್ಟೆ..!” ಹಾಗೆಂದರೇನು? ನನ್ನಪ್ಪ, ಅಜ್ಜನದ್ದೂ ಅದೇ ಕಥೆಯಲ್ಲವೆ? ಆ ಕೊಳಕು ನಿನ್ನ ಬಟ್ಟೆಯದಲ್ಲ… “ಕೊಳಕು” ಮನಸ್ಸಿನ ಅಧಿಕಾರ ದಾಹಿಗಳದ್ದು! ಹೊರಗಿನ ಹಡಬೆ…
ಅನುದಿನ ಕವನ-೧೧೫೨, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ. ಕವನದ ಶೀರ್ಷಿಕೆ: ಬಯಲು
ಬಯಲು ಮುಗಿಲು ಹರಿದು ಸುರಿದರೇನು ಕಾರ್ಮೋಡಗಳು ಕರಗಲೇ ಬೇಕು|| ಗುಡುಗು ಸಿಡಿಲು ಆರ್ಭಟಿಸಿದರೇನು ಬಟ್ಟ ಬಯಲಾಗಲೇ ಬೇಕು|| ಪಾಜಿ ಮುಟ್ಟುವ ಗುರಿ ಒಂದೇ ಆಗಿರಲು ದಾರಿಗಳು ಎಷ್ಟಾದರೂ ಇರಲಿ| ನದಿಯು ಸೊಕ್ಕಿ ಸಿಕ್ಕ ಕಡೆಗೆ ಹರಿದರೇನು ಹೋಗಿ ಸಾಗರ ಸೇರಲೇ ಬೇಕು|…
ಅನುದಿನ ಕವನ-೧೧೫೧, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ವಿಚಿತ್ರಕೊಂದು ವ್ಯಾಖ್ಯೆ
ವಿಚಿತ್ರಕೊಂದು ವ್ಯಾಖ್ಯೆ ಹೀಗೇ ಯೋಚನೆ ಆಡುತ್ತ ಓಡುತ್ತ ಏಳುತ್ತ ಬೀಳುತ್ತ ಥಟ್ಟಂತ ನಿಲ್ಲುತ್ತ ಅತ್ತೊಮ್ಮೆ ಇತ್ತೊಮ್ಮೆ ನೋಡುತ್ತ ನೋವ ನುಂಗುತ್ತ ಮೆಲ್ಲನುಸುರಿತು ವಿಚಿತ್ರಕೊಂದು ವ್ಯಾಖ್ಯೆ ತಿಳೀದಲ್ಲ! ತಲೆ ತುಂಬಿ ಗುಸುಗುಸು ಪಿಸುಗುಟ್ಟಿ ತಿಳೀದ ಹಾಗೆ ಮನಸೆಲ್ಲ ಆವರಿಸಿ ಗಪ್ಪಂತ ಇನ್ನಿಲ್ಲದಂತೆ ಠಾಣೆಯೂರಿದ…
ಅನುದಿನ ಕವನ-೧೧೫೦, ಕವಿ: ಪಿ.ಎಂ.ಕೊಟ್ರಸ್ವಾಮಿ.ಹೂವಿನಹಡಗಲಿ, ಕವನದ ಶೀರ್ಷಿಕೆ: ಕೌದಿ ಹೊಲಿಯುವುದೆಂದರೆ……!
ಕೌದಿ ಹೊಲಿಯುವುದೆಂದರೆ……! ಕೌದಿ ಹೊಲಿಯುವುದೆಂದರೆ ಬದುಕು ಭವಣೆಯ ಕೊಳದಲ್ಲಿ ಸದಾ ನೆನೆ ನೆನೆದು ಮಾಸಿದ ಹಳೆಯ ಸೀರೆಗಳನ್ನು ಹೊಸ ದಾರದೊಂದಿಗೆ ಎಳೆ ಎಳೆಯಾಗಿ ಒಪ್ಪವಾಗಿ ಜೋಡಿಸಿ, ಸಂಜೆ ಹರಡಿದ ನಸುಗೆಂಪು ಆಗಸ ವನು ಎದೆಯ ಪಡಸಾಲೆಯಲ್ಲಿ ಹರಡುವುದು. ನಡುರಾತ್ರಿ ಗುಯ್ಯ್ ಗುಡುವ…
ಅನುದಿನ ಕವನ-೧೧೪೯, ಕವಿ: ಎ.ಎನ್.ರಮೇಶ್, ಗುಬ್ಬಿ ಕವನದ ಶೀರ್ಷಿಕೆ:ಬೆಳಕಿನ ಲಹರಿ..!
ಇದು ಬೆಳಕಿನ ಲಹರಿ. ಬದುಕಿನ ನಿತ್ಯ ಸತ್ಯಗಳ ಭಾವಝರಿ. ಇದು ನಮ್ಮ ನಿಮ್ಮದೇ ಜೀವ-ಜೀವನಗಳ ಅನುದಿನದ ಅನುಕ್ಷಣದ ವಾಸ್ತವ ಸಂಗತಿಗಳ ಕವಿತೆ. ಬಾಳಿನ ಹಾದಿ ಬೆಳಗುತ್ತಾ ಆಂತರ್ಯವನ್ನು ಬೆಳಕಾಗಿಸುವ ಅಕ್ಷರ ಪ್ರಣತೆ. ಇಲ್ಲಿ ಪ್ರತಿ ಚರಣದಲ್ಲೂ ಸತ್ಯ ಸತ್ವಗಳ ಅನಾವರಣವಿದೆ. ಬದುಕಿನ…
ಅನುದಿನ ಕವನ-೧೧೪೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಮಾತು ಮರೆತಂತಿದೆ
ಮಾತು ಮರೆತಂತಿದೆ ಎಷ್ಟೊಂದು ಉಂಟಲ್ಲ ಹೇಳಲು ಆದರ್ಯಾಕೋ ಮಾತು ಮರೆತಂತಿದೆ ಶಬ್ದಗಳಡಗಿ ಎಲ್ಲಾ ಖಾಲಿ ಖಾಲಿ ಬಹುಶಃ ಮಾತು ಮುನಿದಂತಿದೆ ಮೆಲ್ಲಗೆ ಧ್ವನಿ ಎತ್ತಿದರೂ ಹೇಳಲು ಧೂಳು ಧೂಸರು ಗುಪ್ಪೆ ಗುಪ್ಪೆ ಮೆತ್ತಿ ಸ್ವರಕೊಂದು ಅಡ್ಡ ಗೋಡೆಯಾಗಿ ದಿಕ್ಕು ತಪ್ಪಿ ಮಾತು…
ಅನುದಿನ ಕವನ-೧೧೪೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಎಂದಿಗೂ ಮುಗಿಯದ ಕವಿತೆ
ಎಂದಿಗೂ ಮುಗಿಯದ ಕವಿತೆ ಮುಗಿದ ಕೈಗಳಲ್ಲಿ ಬೇಡುವ ಭಾವ ಅಡಗಿದೆ ಹೊಗಳುವ ಮಾತುಗಳಲ್ಲಿ ಯಾವುದೋ ಸ್ವಾರ್ಥ ಇಣುಕಿದೆ ದಾರಿ ತೋರುವ ಬೆಳಕೂ ಕತ್ತಲೆ ಕರುಣಿಸಲು ಹೊಂಚು ಹಾಕಿದೆ ಆಸರೆಗೆ ಹಿಡಿದ ಊರುಗೋಲೂ ಬೀಳಿಸಿ ಮೋಜು ನೋಡಲು ಕಾದಿದೆ ಹಚ್ಚಿಟ್ಟ ಹಣತೆಗಳೂ ಬೆಳಗಿದಂತೆ…
ಅನುದಿನ ಕವನ-೧೧೪೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ನಾನಿನ್ನ ಮರೆತಿಲ್ಲ
ನಾನಿನ್ನ ಮರೆತಿಲ್ಲ ನಮ್ಮೂರ ಗುಡ್ಡದ ಕಲ್ಲು ಹೇಳಿತು ಸಣ್ಣವನಿದ್ದಾಗ ನನ್ನದೆಯ ಮೇಲೆ ಓಡಾಡಿದವನು ನೀನು ನಿನ್ನ ನಾ ಮರೆತಿಲ್ಲ ಕಂದಾ… ಆ ಪುಟ್ಟ ಹೆಜ್ಜೆಯ ಗುರುತು ನಾನಿನ್ನೂ ಕಾಪಿಟ್ಟಿದ್ದೇನೆ… ನಮ್ಮೂರ ಮಣ್ಣು ಮಾತಾಡಿತು ಪುಟ್ಟಾ ನನ್ನ ಮೈ ಮುಖ ಸವರಿ ಆಡಿದ…
ಅನುದಿನ ಕವನ-೧೧೪೫, ಕವಿ: ದುಡ್ಡನಹಳ್ಳಿ ಮಂಜುನಾಥ್, ತುಮಕೂರು, ಕವನದ ಶೀರ್ಷಿಕೆ: ಒಂದು ಅಮರ ಪದ್ಯ
ಒಂದು ಅಮರ ಪದ್ಯ ಆಲ ಹುಣಸೆ ಗುಮ್ಮ ಅಡಿಕೆ ತೆಂಗಿನ ತಮ್ಮ ತಾರೆಯರಳಿ ಬೇವಿನಮ್ಮ ದೇವರಾಗಿ ಕಾಯ್ವರೆಮ್ಮ ಅತ್ತಿ ಮತ್ತಿ ಜವಾರಿ ಅಶೋಕ ಬಂತು ಸವಾರಿ ಹೊನ್ನೆ ತೇಗ ದುಬಾರಿ ಜಾಲಿ ಬಿಲ್ವಾರ ಇವರ ಪ್ರಭಾರಿ ಬೇಲ ನೀಲ ಮದ್ದು ಗೇರು…
