“ಒಮ್ಮೆ ಕಣ್ಣರಳಿಸಿ ಸುತ್ತಲ ಜನಗಳನ್ನು. ನೋಡಿದರೆ.. ಸೂಕ್ಷ್ಮವಾಗಿ ನಿಮ್ಮ ಸುತ್ತಮುತ್ತಲ ಜೀವನಗಳನ್ನು ಅವಲೋಕಿಸಿ ನೋಡಿದರೆ.. ಈ ಕವಿತೆಯಲ್ಲಿರುವ ತರಹದ ವ್ಯಕ್ತಿ, ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಅಷ್ಟೇ ಏಕೆ ಏಷ್ಟೋಬಾರಿ ನಮ್ಮದೇ ಬದುಕಿನ ವಿವಿಧ ಮಜಲುಗಳಲ್ಲಿ ನಾವೇ ಹೀಗೆ ವರ್ತಿಸಿರುತ್ತೇವೆ. ಹಾಗಾಗಿ ಇದು ನಮ್ಮ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೮೮, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕಾವ್ಯ ಪ್ರಕಾರ: ಗಜಲ್ , ರಾಗಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ
ಗಝಲ್ ********* ನನ್ನ ಮನದ ಹೊಸಿಲಿನಲ್ಲಿ ನಸು ನಾಚುತ ಹೃದಯದೊಳಗೆ ಅಡಿಯಿಟ್ಟ ಹೃದಯೇಶ್ವರಿ ನೀನು // ನನ್ನ ಬಾಳ ಬಾಂದಳದ ಮೊದಲ ಪುಟದಲ್ಲಿ ಹೊಸ ಅಧ್ಯಾಯ ಬರೆದ ಅರ್ಧಾಂಗಿ ನೀನು // ನನ್ನ ಮನೆ – ಮನವನರಿತು ಮರು ಮಾರ್ನುಡಿಯದೇ ಸಹ್ಯದಲಿ…
ಅನುದಿನಕವನ-೧೮೭, ಕವಯತ್ರಿ: ನೂರ್ ಜಹಾನ್, ಹೊಸಪೇಟೆ, ಕವನದ ಶೀರ್ಷಿಕೆ: ನಿವೇದನೆ
ನಿವೇದನೆ ಅಂದು ನಿನ್ನನು ಕಂಡಾಗಲೆಲ್ಲಾ ಎದುರಿನಲ್ಲಿ ನೂರು ಚೂರಿಗಳು ಚುಚ್ಚುತಿದ್ದವು ಹೃದಯದಲ್ಲಿ ಇಂದು ಯಾಕೋ ನಿನ್ನನು ಕಂಡರೂ ಎದುರಿನಲ್ಲಿ ಏನೂ ಆಗಲೇ ಇಲ್ಲ ಈ ಹೃದಯದಲ್ಲಿ ನಿನ್ನನು ಕಂಡಾಗಲೆಲ್ಲಾ ನೂರು ನೆನಪು ಕಾಡುತಿದ್ದವು ನೂರು ನೋವು ಆಗುತಿದ್ದವು ಹೃದಯದಲ್ಲಿ ಈಗ…
ದೇಶದ ಎಲ್ಲಾ ಶೋಷಿತರ ಪ್ರತಿಧ್ವನಿ ನಾಡೋಜ ಡಾ.ಸಿದ್ಧಲಿಂಗಯ್ಯ’ -ಪ್ರೊ. ಅಂಜಿನಪ್ಪ ಚಳ್ಳಕೆರೆ
ಹೊಳಲ್ಕೆರೆ: ಜನರ ದನಿಯ ಕವಿ, ಚಳವಳಿ ಸಂಘಟನೆಗಳ ಕವಿ, ಕನ್ನಡದ ಅಸ್ಮಿತೆಯ ಕವಿ, ತನಗಾಗಿ ಕವಿತೆಯಲ್ಲ ಜನರಿಗಾಗಿ ಕವಿತೆಯೆಂದು ಸಾರಿದ ಕವಿ ದಿ. ಜನಕವಿ ಡಾ.ಸಿದ್ಧಲಿಂಗಯ್ಯರವರು ಎಂದು ಪ್ರೊ. ಅಂಜಿನಪ್ಪ ಚಳ್ಳಕೆರೆ ಅವರು ಹೇಳಿದರು. ಹೊಳಲ್ಕೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು…
ಅನುದಿನ ಕವನ-೧೮೬, ಕವಿ: ಗಾನಾಸುಮ ಪಟ್ಟಸೋಮನಹಳ್ಳಿ, ಕವನದ ಶೀರ್ಷಿಕೆ: ಅಪ್ಪ…
ಅಪ್ಪ… ‘ಅಪ್ಪ’ ಎಂಬ ಅನಂತವೇ ಹೀಗೆ..! ಮನೆಯ ಮೇಟಿಯಾಗುತಾನೆ. ಅಮ್ಮನ ಪಾಲಿನ ಬೇಕು- ಬೇಡಗಳ ಅಕ್ಷಯಪತಿಯಾಗುತಾನೆ ಮಕ್ಕಳ ಪಾಲಿನ ಬೇಲಿಯಾಗುತಾನೆ. ರಕ್ಷಣೆಗೆ ಬಂದರೆ ಮನೆಯ ಹೆಬ್ಬಾಗಿಲಾಗುತಾನೆ ಆಕಾಶದ ಹೊದಿಕೆಯಂತೆ ಮನೆಯ ಮೇಲಣ ಸೂರಾಗುತಾನೆ.. ಎಲ್ಲರ ಆಸರೆಯ ನೇಸರನಾಗುತಾನೆ. ಬೇಸರಗೊಳ್ಳದ ಜನಕನಮನ ಕೊನೆಗೆ…
ಅನುದಿನ ಕವನ-೧೮೫, ಕವಿ: ವಿವೇಕಾನಂದ ಎಚ್.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಚಲಿಸುವ ಜಂಗಮನಾಗಿ………
ಚಲಿಸುವ ಜಂಗಮನಾಗಿ….. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಮಾಡಬೇಕೆಂಬ ಆಸೆಯಾಯಿತು…… ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು…
ಅನುದಿನ ಕವನ-೧೮೪, ಕವಯತ್ರಿ:ಅಂಜಲಿ ಬೆಳಗಲ್, ಹೊಸಪೇಟೆ ಕವನದ ಶೀರ್ಷಿಕೆ:ಮಣ್ಣು ಮಾಡಿ ಬಿಟ್ಟೆ ನಿನ್ನ!
👨🍼ಮಣ್ಣು ಮಾಡಿ ಬಿಟ್ಟೆ ನಿನ್ನ🤰🤰 ನಿನ್ನ ನೆನಪಿನ ಕಾಣಿಕೆ ಎಂದು ಅದೆಂಥಾ ಖುಷಿ ಖುಷಿಯಲಿ ನಾನು ಸಾವಿರ ಕನಸು ಕಟ್ಟಿಕೊಂಡಿದ್ದೆ ಮನದಲ್ಲಿ , ಆದರೆ ಇಂದು ನನ್ನ ಕಣ್ಣುಗಳು ತೇವವಾಗಿ ಕಂಬನಿಯ ನದಿಯಲಿ ಆ ನಿನ್ನ ನೆನಪುಗಳೆ ಹೆಣವಾಗಿ ತೆಲುತಿವೆ, ಪ್ರೀತಿ…
ಅನುದಿನ ಕವನ-೧೮೩, ಕವಿ: ಡಾ.ಉದಯ ಪಾಟೀಲ್, ಕಲಬುರಗಿ, ಕವನದ ಶೀರ್ಷಿಕೆ: ನಾನು.. ನನ್ನ ಜೀವನ
ನಾನು.. ನನ್ನ ಜೀವನ.. ಆಸಕ್ತಿ ಏನೂ ಇಲ್ಲ… ಪ್ರಸಿದ್ಧಿ ಪಡೆಯಲು.. ನೀವೆಲ್ಲ ಗುರುತಿಸಿದ್ದೀರಿ, ಸಾಕು , ಇಷ್ಟು.. ನನ್ನ ಪ್ರತಿಭೆಗೆ.. ಆರಕ್ಕೇರಲಿಲ್ಲ, ಮೂರಕ್ಕೆ ಇಳಿಯಲಿಲ್ಲ.. ಯಾರಿಗೆ ಎಷ್ಟು ಅವಶ್ಯಕತೆ ಇದೆಯೋ, ಅಷ್ಟು, ನನ್ನನ್ನು ಗುರುತಿಸಿದರು, ಬಳಿಸಿದ ರು, ನನಗೇನು ದುಃಖ…
ಅನುದಿನ ಕವನ-೧೮೨, ಕವಿ: ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಕವನದ ಶೀರ್ಷಿಕೆ: ಬುದ್ಧನಾಗಲು ಸಿದ್ದನಾಗು
ಬುದ್ಧನಾಗಲು ಸಿದ್ದನಾಗು ನೊಂದು-ಬೆಂದವರ ಆರ್ತನಾದವ ಕೇಳಿ ಅಶಾಂತಿ-ಅಶಿಸ್ತಿನ ಅಗ್ನಿನರ್ತನವ ಕಂಡ ಶಾಕ್ಯಮುನಿ ಶಾಂತಿಯತ್ತ ಸಾಗಿದ|| ದುಷ್ಟನು ಶಿಷ್ಟನಾಗುವ ಶಿಷ್ಟನು-ಶಿವನತ್ತ ಸಾಗುವ ಸತ್ಪಥವ ಹುಡುಕ ತೊಡಗಿದ|| ಚಟ್ಟವನ್ನು ಕಂಡು ಚಡಪಡಿಸಿ ರೋಗಿಯ ಕಂಡು ವಿರಾಗಿಯಾಗಿ ಮೋಹದ ದಾಹವನ್ನು ದಹಿಸಲು ಮುಂದಾದ|| ಪ್ರಜಾಪ್ರೇಮಿ ಸಿದ್ದಾರ್ಥನ…
ಅನುದಿನ ಕವನ-೧೮೧, ಕವಿ:ಕುಮಾರ ಚಲವಾದಿ, ಹಾಸನ, ಹನಿಗವಿತೆಗಳು
🌿 ಮಾನವೀಯತೆ!🌿 ಮಾನವೀಯತೆ ಇರದ ಬದುಕಿಗೆ ಅದೆಲ್ಲಿಯ ಅರ್ಥ? ಮಾತಿನಲ್ಲಿಯೇ ಮನೆಕಟ್ಟುವವರು ಬದುಕಿದ್ದರೂ ವ್ಯರ್ಥ! ಬದುಕೇ ಆದರ್ಶವಾಗಿರಲಿ ಇರಲಿ ಒಂದಿಷ್ಟು ಮೌಲ್ಯ! ಎದುರು ಬಂದವರ ಹೆಗಲಮೇಲಿಡಿ ಪ್ರೀತಿ, ಸ್ನೇಹದ ಶಲ್ಯ! 🌿ಪ್ರಕೃತಿ-ಪ್ರೀತಿ!🌿 ಮಳೆ,ಚಳಿ,ಬಿಸಿಲು ಹೆಚ್ಚಾಯಿತು ಎಂದು ಹಳಿಯದಿರಿ ಪ್ರಕೃತಿಯನ್ನು! ಪರಿಸರದ ರಕ್ಷಣೆಗಾಗಿ…
