ಅನುದಿನ‌ ಕವನ-೧೪೫೯, ರಾಷ್ಟ್ರಕವಿ ಕುವೆಂಪು

ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವೂದು ಇಲ್ಲ; ಕೊನೆಮುಟ್ಟುವುದೂ ಇಲ್ಲ! ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ! ಇಲ್ಲಿ ಎಲ್ಲದಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ…

ನಾ ಓದಿದ ಪುಸ್ತಕ, ಕವನ ಸಂಕಲನ: ಕವಯಿತ್ರಿ ಭವ್ಯ ಕಬ್ಬಳಿ ಅವರ ‘ದೇವರ ತೇರಿಗೂ ಗಾಲಿಗಳು ಬೇಕು’, ಕೃತಿ ಪರಿಚಯ: ಶಾಂತ ಜಯಾನಂದ, ಬೆಂಗಳೂರು

ಭವ್ಯ ಕಬ್ಬಳಿಯವರ ಕಾವ್ಯ ‘ಕಟ್ಟುವ’ ಪರಿಗೆ ಸೋಲುತ್ತೇನೆ. ಒಂದೇ ಗುಟುಕಿಗೆ ಓದಿಸಿಕೊಂಡ ‘ ದೇವರ ತೇರಿಗೂ ಗಾಲಿಗಳು ಬೇಕು’ ಓದಿದಾಗ ಅನಿಸಿದ್ದು. ತಮ್ಮ ಮೊದಲ ಕವನ ಸಂಕಲನವೆಂದು ಹೇಳಿ ಅವರು ಪುಸ್ತಕವನ್ನು ನನ್ನ ಕೈಗಿತ್ತಾಗ, ಓದುವ ಎಂದು ಬದಿಗಿಟ್ಟಿದೆ, ಪುಸ್ತಕ ಕೈಗೆತ್ತಿಕೊಂಡ‌…

ಅನುದಿನ‌ ಕವನ-೧೪೫೮, ಹಿರಿಯ ಕವಿ: ಡಾ.ಬಸವರಾಜ ಸಾದರ, ಬೆಂಗಳೂರು, ಕವನದ ಶೀರ್ಷಿಕೆ: ಕಲ್ಲರಳಿ

ಕಲ್ಲರಳಿ ಮೇಣ ಮಿದ್ದಿದ ಹಾಗೆ, ಕಲೆಯರಳಿದೆ ಇಲ್ಲಿ ಕಲ್ಲುಗಳಲ್ಲಿ; ಜೀವ- ದುಂಬಿದೆ ಸ್ಥಾವರಗಳೊಳಗೆ, ಧ್ಯಾನಸ್ಥ ಶಿಲ್ಪಿಗಳ ಕೈಚಳಕಗಳಲ್ಲಿ. -ಡಾ. ಬಸವರಾಜ ಸಾದರ, ಬೆಂಗಳೂರು

ಅನುದಿನ ಕವನ-೧೪೫೭, ಕವಯಿತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಕನಸುಗಳಿರಬೇಕು

ಕನಸುಗಳಿರಬೇಕು ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ .. ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ … ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ ದುಃಖದ ಅನುಭವಕ್ಕೂ ಸೋಲದೆ ಜೀವಿಸಿ .. ಮತ್ತೆ ಎದ್ದು ನಿಲ್ಲಬೇಕು…

ಅನುದಿನ ಕವನ-೧೪೫೬, ಕವಿ: ಟಿ.ಪಿ. ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ: ಟಿ.ಪಿ. ಉಮೇಶ್, ಹೊಳಲ್ಕೆರೆ

ಹೂಗಳೆಲ್ಲ ಅರಳ್ಯಾವೊ ಮಳೆ ಹೊಡೆತಕೆ ಸೀಮೆ ಭೂಮಿಯೆಲ್ಲ ಅದುರಿ ಚದುರಿ ಮುದುರಿ ಹೊದರಿ ಮಣ್ಣ ಕಣಕಣಗಳು ಹುದುಗೆದ್ದು ಪುನುಗಿ ಬಯಲ ಬಿಲ ಹೊಲ ನೆಲದಲ್ಲು ಕಾದ ಬೀಜ ಗಿಡ ಗಂಟಿ ಬೇಲಿ ಬಳ್ಳಿ ಚಿಗುರಿ ನಿಗುರಿ ಕಲ್ಲ ಸಂದಿಗೊಂದಿಗಳಲ್ಲಿ ಹಸಿರು ಹರಡಿ…

ಅನುದಿನ ಕವನ-೧೪೫೫, ಕವಿ: ವಿಲ್ಸನ್ ಕಟೀಲ್, ದಕ್ಷಿಣ ಕನ್ನಡ. ಕವನದ ಶೀರ್ಷಿಕೆ: ಮುತ್ತಿದ ಸಾಲುಗಳು

ಮುತ್ತಿದ ಸಾಲುಗಳು ನಿನ್ನ ಬತ್ತಲೆ ಬೆನ್ನ ಮೇಲೆ ನನ್ನ ತುಟಿಗಳು ಏನನ್ನೋ ಹುಡುಕುತ್ತಿದ್ದವು… ಅಷ್ಟರಲ್ಲಿ ನೀನು ಮಗ್ಗುಲು ಬದಲಾಯಿಸಿದೆ… ಈಗ ನಾನು ನನ್ನ ತುಟಿಗಳನ್ನು ಹುಡುಕುತ್ತಿದ್ದೇನೆ….. ನಿನ್ನ ಬೆವರಿನ ಉಪ್ಪಲ್ಲಿ ನನ್ನ ತುಟಿಗಳನ್ನು ನೆನೆ ಹಾಕಿದ್ದೇನೆ… ಇನ್ನು ಮುಂದೆ ನನ್ನ ಮುತ್ತುಗಳು…

ಅನುದಿನ ಕವನ-೧೪೫೪, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಏಸು ಬಂದ

ಏಸು ಬಂದ ಏಸು ಬಂದ ನಮ್ಮೂರಿಗೆ ಉದ್ದನೆಯ ನಿಲುವಂಗಿ ನೀಳಗೂದಲು ನಿಡಿದಾದ ಗಡ್ಡ ಬಾಗಿದ ಮೀಸೆ , ಕಂದುಗಣ್ಣು ಹೆಗಲಿಗೆ ಕಂಬಳಿ ಬಗಲಿಗೆ ಕುರಿಮರಿ ಕೈಗೋಲು ಬೀಸುತ್ತಾ ಊರ ತುಂಬಾ ಓಡಾಡಿದ ಅಂಗಾಲು, ಕೈಗಳಿಗೆ ಜಡಿದ ಮೊಳೆಗಳೆಲ್ಲಿ? ಒಸರಿದ ರಕ್ತವೆಲ್ಲಿ ?…

ಅನುದಿನ‌ ಕವನ-೧೪೫೩, ಕವಯಿತ್ರಿ:ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಜೀವ ಬಿಟ್ಟೇವು ….

ಜೀವ ಬಿಟ್ಟೇವು …. ಹೊಟ್ಟಿಯೊಳಗ ಕೆಂಡ ಹೊತ್ತಿ ಉರಿಯುವಾಗ ಮ್ಯಾಗಿಂದ ತಣ್ಣೀರು ಸುರಿದ್ರ ಒಳಗಿನ ಕಿಚ್ಚು ಆರಬಲ್ಲದ ಧಣಿ. ಸೂರ್ಯ ಚಂದ್ರ ಚುಕ್ಕೆಯ ಜಾತ್ರೆ ತೋರ್ಸಿ ಭೂಮ್ತಾಯಿ ಕಿತ್ಕಂಡ್ರಿ ನೀವ್ ತೋರಿಸಿದ ಆಕಾಶ ನೋಡಿದ್ರ ಬದುಕಿನ ಹೊಟ್ಟೆ ಕಿಚ್ಚು ಆರ್ತದ ಧಣಿ.…

ಅನುದಿನ ಕವನ-೧೪೫೨, ಕವಯಿತ್ರಿ: ರಮ್ಯಾ ಕೆ ಜಿ ಮೂರ್ನಾಡು, ಕೊಡಗು

ಹೆಚ್ಚುತ್ತದೆ ಏಕೆ ನಿಮ್ಮ ಅಸಹನೆಯ ಆಳ? ಒಡೆಯುತ್ತದೆ ಏಕೆ ನಿಮ್ಮ ದ್ವೇಷದ ಕಟ್ಟೆ? ಶತಮಾನಗಳ ಅವಮಾನ ಸಹಿಸಿದ ಬದುಕಿಗೆ ನಕ್ಕರೆ ಎಷ್ಟೊಂದು ದೂರುಗಳು! ಅತ್ತರೆ ಎಷ್ಟೊಂದು ಗುದ್ದುಗಳು! ನಿಮ್ಮ ತಿರಸ್ಕಾರದ ನೋಟ ತಿವಿಯುತ್ತದೆ ಏಕೆ? ಬಗ್ಗಿದ ನಡುವ ನೆಟ್ಟಗಾಗಲು ಬಿಡುವುದೇ ಇಲ್ಲ…

ಅನುದಿನ ಕವನ-೧೪೫೧, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಎದೆಯಲ್ಲಿ ಮುಳ್ಳು ಮುರಿದ ಸದ್ದು

ಎದೆಯಲ್ಲಿ ಮುಳ್ಳು ಮುರಿದ ಸದ್ದು ಹೆಚ್ಚು ಮಾತನಾಡಿಸಬೇಡ ನೀನೇ ಗೀರಿದ ಗಾಯದ ನೋವನ್ನು ನಿನ್ನೆದುರು ಹರವಿಬಿಟ್ಟೆನೆಂಬ ಭಯ… ಬಹಳ ಹೊತ್ತು ಜೊತೆಗಿರಬೇಡ ಬದುಕುವ ಆಸೆ ಚಿಗಿತುಕೊಂಡು ನೀನು ಬೇಕೇ ಬೇಕೆಂಬ ಹಠವನ್ನು ಹೇಗೆ ಸಂತೈಸಲಿ….. ಹೂತ ನೆನಪುಗಳ ಗೋರಿ ಮತ್ತೆ ಅಗೆಯಬೇಡ…