ನಕ್ಷತ್ರಗಳು ಹುಂಜದ ಕೂಗಿಗೆ ಮೈ ಮುರಿಯುತ್ತಾ ಏಳುತ್ತಿದ್ದೆವಾಗ ಆಜಾನ್ ಸದ್ದಿಗೆ ಎದ್ದು ಕುಳಿತುನೋಡಿದರೆ ಬಯಲಿನಲ್ಲಿ ಆಗಸ ಗೋಚರ ಕಣ್ಣಿಗೆ ಕಂಡಾಗ’ಬೆಳ್ಳಿ ಚುಕ್ಕಿ’ ನನ್ನಜ್ಜ ಹೇಳುತ್ತಿದ್ದ ಅದು’ಧೃವ ನಕ್ಷತ್ರ’ಎಂದು ಉಳಿದ ನಕ್ಷತ್ರಗಳ ಬಗ್ಗೆ ಕೇಳಿದಾಗ “ಸತ್ತವರೆಲ್ಲಾ ನಕ್ಷತ್ರಗಳಾಗುತ್ತಾರೆ” ಎನ್ನುತ್ತಿದ್ದರು ಬಾಲ್ಯದಲ್ಲಿ “ಅಮ್ಮನ ಸೀರೆ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೦೭೦, ಕವಿ:ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ: ಮಹಾನಾಯಕ (ಗಜಲ್)
ಬಾಬಾ ಸಾಹೇಬರ ನೆನಪಿನೊಂದಿಗೆ……… ಮಹಾನಾಯಕ (ಗಜಲ್) ಶೋಷಿತರ ಬಾಳಿಗೆ ಬೆಳಕು ಬೀರಿದ ಸೂರ್ಯನೇ ಮಹಾನಾಯಕ. ಉರಿದ ಬದುಕಿಗೆ ತಂಪು ನೀಡಿದ ಚಂದ್ರನೇ ಮಹಾನಾಯಕ. ಜಾತಿಸಮುದ್ರಕ್ಕಿಳಿದು ಸಮತೆಯ ಮುತ್ತುರತ್ನ ತರಬಯಸಿದವನು ಏಕತೆಯ ಗ್ರಂಥಕ್ಕೆ ಜನ್ಮ ನೀಡಿದ ಲೇಖಕನೇ ಮಹಾನಾಯಕ. ಮಾತಿಲ್ಲದವರಿಗೆ ಮಾತಾಗಿ ದಿಕ್ಕಿಲ್ಲದವರಿಗೆ…
ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಮಹತ್ವದ್ದು -ವಿಎಸ್ ಕೆ ವಿವಿ ಕುಲಸಚಿವ ಎಸ್.ಎನ್. ರುದ್ರೇಶ್
ಬಳ್ಳಾರಿ, ಡಿ.6: ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ವಿಜಯನಗರ ಶ್ರೀಕೃಷ್ಣ ದೆವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ್ ಅವರು ಹೇಳಿದರು. ಹಂದ್ಯಾಳು ಶ್ರೀ ಮಹಾದೇವತಾತ ಕಲಾ ಸಂಘ ಮಂಗಳವಾರ ಸಂಜೆ ಸಮೀಪದ ಶ್ರೀಧರಗಡ್ಡೆ ಗ್ರಾಮದ ಶ್ರೀಮಾರೆಮ್ಮ…
ಅನುದಿನ ಕವನ-೧೦೬೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು
ಕನಸುಗಳು ವಾಪಸು ನೆನಪಾಗುವುದಿಲ್ಲ ಎಚ್ಚರಗೊಂಡ ಮೇಲೆ ಎಚ್ಚತ್ತಗೊಂಡ ಮೇಲೆ ಎಂತಹುದೋ ಬಹು ಮುಖ್ಯದ್ದು ಜೊತೆ ಇಲ್ಲವಾಗುತ್ತದೆ ಜೊತೆ ಇಲ್ಲವಾದ ಮೇಲೂ ಜೊತೆಗಿದ್ದದ್ದುರ ಜೊತೆ ಹೆಜ್ಜೆಗಳು ಸಾವಾಗಿರುತ್ತವೆ ನಡೆಯುತ್ತ ನಡೆಯುತ್ತಾ ಬದುಕು ಅಲೆಯುತ್ತಿರುತ್ತದೆ ಉಸಿರಲ್ಲೀಗ ನಿರ್ಜೀವ ಭಾವಗಳು ಮತ್ತೇ ಮತ್ತೇ ಜೀವಂತಗೊಳಿಸಲು ಉಸಿರನೂದಿ…
ಅನುದಿನ ಕವನ-೧೦೬೮, ಕವಿಯಿತ್ರಿ: ಭಾರತಿ ಹೆಗಡೆ, ಬೆಂಗಳೂರು
ನೀನು ನನ್ನ ನಗುವನ್ನು ಕಿತ್ತುಕೊಳ್ಳ ಬಯಸಿದೆ ಎಳೆಯ ಹೊರಟಿದ್ದೆ ನನ್ನ ತುಟಿಗಳ ಮೇಲೆ ನಿನ್ನದೇ ನೋವಿನ ಗೆರೆಯನ್ನು ಹಿಂಡಬೇಕೆಂದಿದ್ದೆ ನಿನ್ನ ಮುಷ್ಟಿಯಲ್ಲಿ ಹಿಡಿದು ನರಳಿಸಿ ನೇಯ ಬೇಕೆಂದಿದ್ದೆ ನನ್ನ ಬದುಕ ಕೌದಿಯನ್ನು ಎಲೆ ಮರುಳೇ.. ನನ್ನ ಖುಷಿ ಈ ಚೌಕಟ್ಟಿನಾಚೆಯದ್ದು ಹೊದ್ದಿರುವೆ…
ಅನುದಿನ ಕವನ-೧೦೬೭, ಕವಿಯಿತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಸಂಜೆ
ಒಂದು ಸಂಜೆ ಮುಗಿಲಿನ ಬಯಲಾಗ ಬಣ್ಣದ ಓಕುಳಿ ಸುsರೀsದ ಹರಡಿತ್ತ ಎದೆಯ ಗೂಡಿನ ಸಂದಿಯೊಳಗ ಜೀಕಳಿ ತಾ ಛಲ್ಲಂತ ಚಿಮ್ಮಿತ್ತ ॥ ಬಾನ ರಂಗಿನ ಗುಂಗಿನ್ಯಾಗ ಮತ್ತ ಸಂಜಿಯ ಮಬ್ಬಿನ್ಯಾಗ ಅತ್ತ ಇತ್ತ ಹಾರಿ ಜಿಗಿದು ಮನ ಸಂಚಾರ ಹೊರಟಿತ್ತ॥ ನೆನಪು…
ಅನುದಿನ ಕವನ-೧೦೬೬, ಕವಿಯಿತ್ರಿ: ನಿಂಗಮ್ಮ ಭಾವಿಕಟ್ಟಿ . ಹುನಗುಂದ, ಕಾವ್ಯ ಪ್ರಕಾರ: ಟಂಕಾಗಳು
ಟಂಕಾಗಳು ಪಕ್ಕದಲ್ಲಿದ್ದ ಆ ಕಡತ ಮುಂದಿನ ಮೇಜು ಸೇರಲು ವಾರ, ತಿಂಗಳು, ವರ್ಷ ಸಾವಿರ ಲಕ್ಷಗಳು *** ಮೂರ್ತಿಯಾಗಿಸೋ ಪೆಟ್ಟುಗಳ ಯಾತನೆ ಸಂಕಟಗಳ ಸಹಿಸಿಕೊಂಡರೇನೇ ನೀ ಪೂಜಿಸಲ್ಪಡುವೆ *** ʼಟಂಕಾʼ ಎಂಬುದು ಪರ್ಷಿಯನ್ ಜಪಾನೀ ಕಾವ್ಯ ಪ್ರಕಾರ ಮೂವತ್ತೊಂದು ಅಕ್ಷರ ಚಲುವೆಯ…
ಬಳ್ಳಾರಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ -ಕಾಂಗ್ರೆಸ್ ಮುಖಂಡ ಬಿ. ವೆಂಕಟೇಶ್ ಪ್ರಸಾದ್
ಬಳ್ಳಾರಿ, ಡಿ.2: ಬಳ್ಳಾರಿ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಿ. ವೆಂಕಟೇಶ್ ಪ್ರಸಾದ್ ಅವರು ಹೇಳಿದರು. ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಶುಕ್ರವಾರ ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು…
ಅನುದಿನ ಕವನ-೧೦೬೫, ಕವಿಯಿತ್ರಿ: ರೇಣುಕಾ ರಮಾನಂದ, ಅಂಕೋಲಾ, ಕವನದ ಶೀರ್ಷಿಕೆ: ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ
ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ ಸತ್ಯ ಸುಳ್ಳು ಎರಡನ್ನೂ ಬೆರೆಸಿ ಒಂದಿಷ್ಟು ಪದ್ಯ ಬರೆದೆ ನಿನ್ನ ಬಗ್ಗೆ….. ನೀನಾಗ ಊರುಬಿಟ್ಟು ಓಡಿಹೋಗಿದ್ದೆ ಚಿನ್ನಿದಾಂಡು ಮರಕೋತಿ ಕಣ್ಣುಮುಚ್ಚಾಲೆ ಆಡುವಾಗ ಇಲ್ಲದ ಪ್ರೀತಿ ನೀನೆಲ್ಲೋ ದೇಶಾಂತರಕ್ಕೆ ಹೋದಮೇಲೆ ಅಂಕುರಿಸಿ ಚಂದ್ರ ತಾರೆ ಎಂದೆಲ್ಲ ಕನವರಿಸುವಂತೆ ಮಾಡಿ…
ಇಂದು ಸಂಜೆ ಬಳ್ಳಾರಿಯಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಆಯೋಜನೆ
ಬಳ್ಳಾರಿ, ಡಿ.1: ನಗರದ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಇಂದು(ಶುಕ್ರವಾರ) ಸಂಜೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ‘ಕಾರ್ತೀಕ ಸಾಂಸ್ಕೃತಿಕ ಉತ್ಸವ’ ವನ್ನು ಆಯೋಜಿಸಿದೆ. ಸಂಜೆ ಆರು ಗಂಟೆಗೆ ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ…
