ಅನುದಿನ ಕವನ-೭೧೦, ಕವಿ: -ಎ.ಎನ್.ರಮೇಶ್.ಗುಬ್ಬಿ, ಕವನದ ಶೀರ್ಷಿಕೆ: ಬದುಕು ಬೆಳಕು

“ಇಲ್ಲಿ ನಾನೆಂದರೆ ನಾನಲ್ಲ. ಇದು ಸಾಧಕರ ಕವಿತೆ. ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟುಕೊಂಡು ಜನಿಸಿದ ಬಂಗಾರದ ಕುಸುಮಗಳ ಗೀತೆಯಲ್ಲವಿದು. ಕಷ್ಟಗಳ ಕಡುಬೆಂಕಿಯಲಿ ಅರಳಿದ ಹೂಗಳ ವ್ಯಥೆ ಯಶೋಗಾಥೆಗಳ ಭಾವಗೀತೆ. ಹೆಣ್ಣಿರಬಹುದು, ಗಂಡಿರಬಹುದು ಇಂತಹ ಜೀವಗಳೇ ಬುವಿಯ ಬದುಕುಗಳಿಗೆ ಸ್ಫೂರ್ತಿ. ಬದುಕಿನ ಬೆಳ್ಕಿಗೆ…

ಅನುದಿನ ಕವನ-೭೦೯, ಕವಿ: ಡಾ.ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ:ಖಾಲಿ ಜೋಳಿಗೆ

ಖಾಲಿ ಜೋಳಿಗೆ ಬರೀ ತಪ್ಪುಗಳನ್ನು ಹುಡುಕದಿರು ಅಕ್ಕಿಯಲ್ಲಿ ತುಂಬಾ ಹಳ್ಳುಗಳು ಇವೆ ಆರಿಸು ಅಕ್ಕಿ ಆರಿಸದಿರು ಹಳ್ಳು ನುಸಿ, ಬಾಲುಹುಳು ಎಂದು ಅಕ್ಕಿಯನ್ನೇ ಎತ್ತಿ ಎಸೆಯದಿರು; ಹಸಿವು ಹೆತ್ತ ಕರುಳು ಬಾಣಂತಿ ನಾನು! ಹಸಿವೆಯ ಕುರಿತ ನಿನ್ನ ಒಣ ಮಾತು ಹೊಟ್ಟೆ…

ಅನುದಿನ ಕವನ-೭೦೮, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಒಲವೇ ನಮ್ಮ ಬದುಕು

ಒಲವೇ ನಮ್ಮ ಬದುಕು ಬದುಕಿನ ಜಾತ್ರೆಯೊಳಗ ಸಂಸಾರ ತೇರನು ಏರಿ ಬಲುದೂರ ಬಂದೇವ ಕೈಚೆಲ್ಲಿ ಕೂರುವದ್ಯಾಕ..? ನಗು ನಗುತ ಹೆಜ್ಜಿ ಹಾಕ! ಕಣ್ಣಾಗ ಕಣ್ಣೀರ ಹೊಳಿಯಾಕ, ದನಿಯಾಗ ಬ್ಯಾಸರದ ಸುಳಿವ್ಯಾಕ, ಒಳಗೊಳಗ ಹೆದರಿಕೆಯಾಕ…? ಕಷ್ಟಗಳು ಎಲ್ಲರಿಗೂ ಬರಾಕ ಬೇಕ ಹೆದರದ ದೇವರ…

ಅನುದಿನ‌ ಕವನ-೭೦೭, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ತನಗಗಳು

ತನಗಗಳು ಬಾ ಸಖಿಯೆ ಬಾಳಿಗೆ ಒಲವಿನ ಜೇನಾಗಿ..! ಹರಿಯುತಿರೆ ಪ್ರೀತಿ ದರ್ಪಣ ಬಿಂಬವಾಗಿ..!! ಬಿಂದಿಗೆಯ ನೀರಾಗಿ ಒಡಲನ್ನು ತಣಿಸು..! ನಂದದ ದೀಪವಾಗಿ ಬೆಳಕನ್ನು ಹರಿಸು..!! ಜೀವನದ ಕನಸು ನಿನ್ನಿಂದ ಈಡೇರಲಿ..! ಹೊಸಬಾಳ ಹಾದಿಯು ಮುನ್ನುಡಿ ಬರೆಸಲಿ..!! ಕಲ್ಯಾಣ ಮಂಟಪದಿ ಕೈಹಿಡಿದ ತರುಣಿ..!…

ಅನುದಿನ ಕವನ-೭೦೬, ಕವಿ:ಸಿದ್ಧರಾಮ‌ ಕೂಡ್ಲಿಗಿ, ಕವನದ ಶೀರ್ಷಿಕೆ: ಕಂಗಳ ಸೂರ್ಯ

ಬಾಬಾ ಸಾಹೇಬರ ನೆನಪಿನೊಂದಿಗೆ……… ಕಂಗಳ ಸೂರ್ಯ ಅದೆಷ್ಟೋ ಶತಮಾನಗಳಿಂದ ಆಗಸವನ್ನೇ ನೋಡದೆ ನಡೆಯುತ್ತಿದ್ದರವರು ತಮ್ಮತನವನೆಲ್ಲ ಯಾರದೋ ಪಾದಗಳ ಧೂಳಾಗಿಸಿ ಕಂಬನಿಗಳ ಕಡಲನ್ನೇ ಬಾಯಾರಿಕೆಯ ತಣಿವನ್ನಾಗಿಸಿ ನಡೆಯುತ್ತಲೇ ಇದ್ದರು ಸೂರ್ಯ ಚಂದಿರರನ್ನೂ ನೋಡದಂತೆ ತಮ್ಮ ಮುಖಗಳು ತಮಗೇ ತಿಳಿಯದಂತೆ ಅದೆಷ್ಟು ನೋವುಗಳು ಯಾತನೆಗಳು…

ಅನುದಿನ ಕವನ-೭೦೪, ಕವಿ: ಹೊಸಪೇಟೆ ವಿಕ್ರಮ‌ ಬಿ.ಕೆ, ಬೆಂಗಳೂರು, ಕವನದ ಶೀರ್ಷಿಕೆ: ಸಾಲಗಾರ

ಸಾಲಗಾರ ಒಳಗೆ ಕಾಡಿ ಬೇಡಿ ಕಿರಿಚಿ ಪರಚಿ ಭಾವಲೋಕ ಹೊಡೆದು ನಿಟ್ಟುಸಿರು ಬಿಡುವ ಕವನ ಶಾಂತಿಯ ಸಾಲ ಕೊಡುವ ದಂಧೆ.. ಎಷ್ಟು ಕಾಲ ಪದಗಳಲ್ಲಿ ಸೇರಿ ಇರುವುದು? ಬಡ್ಡಿ ಹೆಚ್ಚು ಗಳಿಸುವ ಕಾತುರ ಓದುವ ಕಣ್ಣುಗಳಿಗೆ ಕಾದು ಮನಸಿನೊಳಗೆ ಜಿಗಿಯುತ್ತೆ; ಹೊಸಲೋಕ…

ಅನುದಿನ ಕವನ-೭೦೩, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿಲ್ಲೆ, ಕವನದ ಶೀರ್ಷಿಕೆ: ಲಯದ ನಾದ

ಲಯದ ನಾದ ಕೆಂಪು ಬಸ್ಸಿನ ವೇಗದಿ ಕನಸ ಕಾಣುತಿದೆ ಭಂಡಾಯದ ಹೊಗೆ.. ವಿಚಿತ್ರ ತರ್ಕದ ಕೋಟುಗಳ ನಡುವೆ ಬಂದಿಯಾಗಿದೆ ಅಲುಗಾಡುವ ಹಸಿರ ಹುಲ್ಲು… ಭಾವನೆಯ ಒಡಾಟಕೆ ಹೊರಾಟವಿಲ್ಲದ ಮೂಕ ಪಕ್ಷಿಗಳು ಬೆಂಚುಗಳಲಿ ತಲೆಬಾಗಿವೆ…. ಇದಕೆ ಸೋತ ಷರಟುಗಳು ಮುಗಿಲ ನೋಡುತ ತಲೆ…

ಅನುದಿನ ಕವನ-೭೦೨, ಕವಿ: ಮಹಿಮ, ಹಂದ್ಯಾಳ್, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಮುಪ್ಪು

ಮುಪ್ಪು ಸುಂದರಿಯ ವರಿಸಲು ಬಂದರು ಸಾವಿರಾರು ರಾಜರುಗಳು ಸಾಲು ಸಾಲಾಗಿ.. ಅವಳು ಯಾರನ್ನೂ ಒಪ್ಪಲಿಲ್ಲ.. ಹೇ ಕುರೂಪಿಗಳಾ ಅಂದುಬಿಟ್ಟಳು.. ಕೊನೆಗೆ ಓರ್ವ ರಾಜ ಬಂದವಳೆದುರು ನಿಂತ ಸುಂದರಿ ಅವನ ನೋಡುತ್ತಲೇ ಬೆಚ್ಚಿ ಬೆದರಿ ದಿಕ್ಕೆಟ್ಟು ಓಡಿದಳು.. ರಾಜ ಬಿಡಲಿಲ್ಲ ಹಿಂಬಾಲಿಸಿ ಅವಳ…

ಅನುದಿನ‌ ಕವನ-೭೦೧, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಬುದ್ದ ಇನ್ನೂ ಅರ್ಥವಾಗಿಲ್ಲ….!

ಬುದ್ದ ಇನ್ನೂ ಅರ್ಥವಾಗಿಲ್ಲ….! ಮೇಲುಕೀಳಿನ ಅಸಹ್ಯವೆಲ್ಲವ ತಲೆಗೇರಿಸಿಕೊಂಡು ಜಾತಿಪಿತ್ತವ ಮುಡಿಕಟ್ಟಿಕೊಂಡು ನಲ್ಲಿ ತೊಂಬೆ ತೊಳೆದು ಸ್ವಚ್ಛಗೊಳಿಸಿ ಶುದ್ದವಾದವೆಂದ ಕೊಳಕು ಮನುಷ್ಯರಿಗೆ ನೀನು ಅರ್ಥವಾಗುವುದಿಲ್ಲ ಗುರುವೆ…. ನಿನ್ನ ಅನುಸರಿಸುತ್ತೇವೆಂದು ನೆಪಮಾತ್ರಕ್ಕೆ ಬೊಗಳೆ ಬಿಡುವ ಸಿದ್ದಾಂತಿಗಳಿಗೆ ಭಾಷಣ ಮುಗಿಯುತ್ತಿದಂತೆ ಬಣ್ಣಮಾತು ಬದಲಿಸುವವರಿಗೆ ನೀನು ಅರ್ಥವಾಗುವುದಿಲ್ಲ…

ಅನುದಿನ‌ ಕವನ-೭೦೦, ಕವಯಿತ್ರಿ:ವಿ ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಅಪ್ಪ

ಅಪ್ಪ ಮೇಲುನೋಟಕ್ಕೆ ಒರಟಾಗಿ ಕಾಣುವ ಅಪ್ಪ.            ಹೂವು ಹಣ್ಣು ತೆನೆ ಜೊತೆ                                ಸಂಬಂಧ…