ವಿದ್ಯಾರ್ಥಿಗಳ ಯಶಸ್ಸು ಶ್ರದ್ಧೆ, ಪರಿಶ್ರಮದಲ್ಲಿದೆ -ಡಾ.ಪಿ.ರಾಧಾಕೃಷ್ಣ

ಬಳ್ಳಾರಿ, ನ.26: ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ ಎಂದು ಶ್ರೀ ಚೈತನ್ಯ ಕಾಲೇಜು ನಿರ್ದೇಶಕ ಡಾ.‌ಪಿ. ರಾಧಾಕೃಷ್ಣ ಅವರು ಹೇಳಿದರು. ನಗರದ ಸನ್ಮಾರ್ಗ ಗೆಳೆಯರ ಬಳಗ ಮತ್ತು ಶ್ರೀ ಮಂಜುನಾಥ ಲಲಿತಕಲಾ ಬಳಗ ಸಹಯೋಗದಲ್ಲಿ ಶನಿವಾರ ಸ್ಥಳೀಯ ಬಾಲಕಿಯರ…

ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣವೇ ನಮ್ಮ ಸಂಘದ ಗುರಿ: ಸಿ. ಇಬ್ರಾಹಿಂ ಬಾಬು

ಬಳ್ಳಾರಿ,ನ.23: ತಾಲೂಕಿನ ಗಾರ್ಮೆಂಟ್ಸ್ ಉದ್ಯಮದ ಕಟ್ಟ ಕಡೆಯ ಕಾರ್ಮಿಕನ ಕಲ್ಯಾಣ ಮಾಡುವುದೇ ತಮ್ಮ ಗುರಿ ಎಂದು ನೂತನ ಬಳ್ಳಾರಿ ತಾಲೂಕು ಗಾರ್ಮೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು ಹೇಳಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ…

ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಸರ್ವ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ, ಮುಖ್ಯಮಂತ್ರಿ ಬೊಮ್ಮಾಯಿ ಭಾಗಿ

ಬಳ್ಳಾರಿ, ನ.19: ರಾಜ್ಯ‌ ಬಿಜೆಪಿ ನಗರದಲ್ಲಿ‌ ಭಾನುವಾರ(ನ.19) ಆಯೋಜಿಸಿರುವ ಪರಿಶಿಷ್ಟ ಪಂಗಡಗಳ(ಎಸ್.ಟಿ) ನವಶಕ್ತಿ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಸಂಸದರು,…

ಮನುಷ್ಯನ ಆತಂಕ,ಉದ್ವೇಗ, ಕೋಪದ ಶಮನಕ್ಕೆ ತಾಳ್ಮೆಯೇ ಮದ್ದು   -ಡಾ.ಮಾನಕರಿ  ಶ್ರೀನಿವಾಸಾಚಾರ್ಯ

ಬಳ್ಳಾರಿ. ನ ೧೮: ಮನುಷ್ಯ  ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ,ಉದ್ವೇಗ, ಕೋಪವನ್ನು ಸುಲಭವಾಗಿ ಗೆಲ್ಲಬಹುದು ಎಂದು ತೆಕ್ಕಲಕೋಟೆ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರೂ ಆದ ಸಾಹಿತಿ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಅವರು ಹೇಳಿದರು. ನಗರದ ಶ್ರೀಮತಿ ಸರಳಾದೇವಿ  ಸತೀಶ್ಛಂದ್ರ…

ಮಕ್ಕಳ ಸರ್ವತೋಮುಖ ಪ್ರಗತಿಗೆ ಪ್ರತಿಭಾ ಕಾರಂಜಿ ಸಹಕಾರಿ -ಶಾಸಕ‌ ಜಿ.ಸೋಮಶೇಖರ ರೆಡ್ಡಿ

ಬಳ್ಳಾರಿ, ನ.17: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕರ ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು. ನಗರದ ಹೀರದ ಸೂಗಮ್ಮ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಪೂರ್ವ ವಲಯದ ತಾಲೂಕು‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ…

ಮಧುರಾಣಿ, ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ. ಅಪ್ಪಗೆರೆ, ಡಾ. ಎಂ.ಬಿ.ಕಟ್ಟಿ ಕೃತಿಗಳಿಗೆ ‘ಅಮ್ಮ ಪ್ರಶಸ್ತಿ’

ಸೇಡಂ, ನ.16: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ ಗೆ ಮಧುರಾಣಿ ಎಚ್.ಎಸ್., ಎಸ್.ಗಂಗಾಧರಯ್ಯ, ಆಶಾ ರಘು, ಸಬಿತಾ ಬನ್ನಾಡಿ, ಡಾ.ಅಪ್ಪಗೆರೆ ಸೋಮಶೇಖರ ಮತ್ತು ಡಾ.ಎಂ.ಬಿ.ಕಟ್ಟಿ ಅವರ ಕೃತಿಗಳು…

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ -ಶೋಭ ಮಲ್ಕಿಒಡೆಯರ್, ಕವಯತ್ರಿ, ಹೂವಿನ ಹಡಗಲಿ

ಮಕ್ಕಳ ದಿನಾಚರಣೆ-2022 ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು…

23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪರಿಗೆ ಸನ್ಮಾನ

ಬಳ್ಳಾರಿ, ನ.13:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡುರಂಗಪ್ಪ ಅವರನ್ನು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಭಾನುವಾರ ನಗರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಲ್ಲಿನ ಸಿರುಗುಪ್ಪ ರಸ್ತೆಯ ಹವಂ ಬಾವಿ ಗಾನಯೋಗಿ ಕಲಾ ಕೇಂದ್ರದಲ್ಲಿ 23ನೇ ರಾಗರಂಗ ಮಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಂಡುರಂಗಪ್ಪ…

ತೊಗಲುಗೊಂಬೆ ಕಲಾವಿದೆ ಬೆಳಗಲ್ಲು ಮಹಾಲಿಂಗಮ್ಮ ವಿಧಿವಶ

ಬಳ್ಳಾರಿ, ನ.12:ತೊಗಲುಗೊಂಬೆ ಹಿರಿಯ ಕಲಾವಿದೆ ನಗರದ ಶ್ರೀಮತಿ ಬೆಳಗಲ್ಲು ಮಹಾಲಿಂಗಮ್ಮ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ. ಮಹಾಲಿಂಗಮ್ಮ ಅವರಿಗೆ 86 ವರ್ಷವಾಗಿತ್ತು. ಪತಿ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ…

ರಾಘವ ಮೆಮೋರಿಯಲ್ ಅಸೋಶಿಯೇಶನ್ ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ, ಅಧ್ಯಕ್ಷರಾಗಿ ಕೆ ಕೊಟೇಶ್ವರ ರಾವ್ ಅವರು ಪುನರಾಯ್ಕೆ

ಬಳ್ಳಾರಿ, ನ.11: ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ಜರುಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಸೋಶಿಯೇಶನ್ ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ, ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಕೆ ಕೊಟೇಶ್ವರ ರಾವ್ ಅವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ…