ವಿಜಯನಗರ ಡಿಸಿ, ಎಸ್ಪಿ ದಿಢೀರ್ ವರ್ಗಾವಣೆ: ಸಾರ್ವಜನಿಕರ ಅಚ್ಚರಿ

ಹೊಸಪೇಟೆ(ವಿಜಯನಗರ), ನ.4: ಜಿಲ್ಲೆಯ ದಕ್ಷ ಅಧಿಕಾರಿಗಳೆಂದು ಗುರುತಿಸಿಕೊಂಡಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿ ಶುಕ್ರವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ದಿಢೀರ್ ಸರಕಾರದ ಆದೇಶ ಸಾರ್ವಜನಿಕರಲ್ಲಿ…

ಜ.7, 8ರಂದು ಹಂಪಿ ಉತ್ಸವ -ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್

ಹೊಸಪೇಟೆ(ವಿಜಯನಗರ),ನ.4: ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಸಾಹೇಬ್ ಜೊಲ್ಲೆ ಹಾಗೂ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಿದ್ದು ಜ.7 ಮತ್ತು 8 ರಂದು ಹಂಪಿ ಉತ್ಸವವನ್ನು…

ಏಕಲವ್ಯ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ: ಹಿಂದುಸ್ಥಾನಿ ಗಾಯನದಲ್ಲಿ ಮೊದಲ ಸ್ಥಾನ ಪಡೆದ ಕೆ. ದೊಡ್ಡಬಸಪ್ಪ

ಬಳ್ಳಾರಿ, ನ.4: ನವದೆಹಲಿಯ ಕೇಂದ್ರ ಸರಕಾರದ ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರಬಲ್ ಸ್ಟೂಡೆಂಟ್ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮೂರನೇ ಏಕಲವ್ಯ ಮಾದರಿ ವಸತಿ ಶಾಲೆಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ-2022ದಲ್ಲಿ ನಗರದ ಸಂಗೀತ ಶಿಕ್ಷಕ ಕೆ ದೊಡ್ಡಬಸಪ್ಪ ಅವರಿಗೆ ರಾಷ್ಟ್ರಮಟ್ಟದ ಮೊದಲ‌ಸ್ಥಾನ…

ಬಳ್ಳಾರಿಯಲ್ಲಿ ಸಂಭ್ರಮದ ರಾಜ್ಯೋತ್ಸವ: ಏಕೀಕರಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರ ಸ್ಮರಣೆ ಅಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ,ನ.1: ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ)…

ಮುತ್ತುರಾಜ್ ಗೆಳೆಯರ ಬಳಗದಿಂದ ಶಾಲಾ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಣೆ

ಬಳ್ಳಾರಿ, ನ.1: ವಿವಿಧ ವೃತ್ತಿಗಳಲ್ಲಿ ತಮ್ಮ ದುಡಿಮೆ ಕಂಡುಕೊಂಡಿರುವ ಬಳ್ಳಾರಿಯ ಮುತ್ತು ರಾಜ್ ಗೆಳೆಯರ ಬಳಗದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಕರ್ನಾಟಕ ರತ್ನ ಡಾ. ಪುನಿತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ಸರ್ಕಾರಿ ಶಾಲೆಯ 500ಕ್ಕೂ ಹೆಚ್ಚು…

ಸಾಹಿತಿ ಸಿದ್ಧರಾಮ ಹಿರೇಮಠರಿಗೆ ದಸಾಪ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ

ಕೂಡ್ಲಿಗಿ: ಪಟ್ಟಣದ ಹಿರಿಯ ಸಾಹಿತಿ ಸಿದ್ಧರಾಮ ಹಿರೇಮಠ ಅವರಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ ನ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಸಂಭ್ರಮದ ಅಂಗವಾಗಿ ಕೊಡ ಮಾಡುವ ಬೆಳ್ಳಿ ಸಂಭ್ರಮ ಗಜಲ್…

ಹವ್ಯಾಸಿ ಛಾಯಾಗ್ರಾಹಕ ಸಿದ್ಧರಾಮ‌ ಕೂಡ್ಲಿಗಿ ಮೂರನೇ ಕಣ್ಣಲ್ಲಿ ಸೂರ್ಯಗ್ರಹಣ

ಗ್ರಹಣ ಇದೆ ಅಂದತಕ್ಷಣ ನಮ್ಮ ಭಾಗದಲ್ಲಿ ಯಾವಾಗ ಗ್ರಹಣ ಆಗುತ್ತದೆ ಎಂದು ಕಾಯ್ತಾ ಇದ್ದೆ. ಐದು ಗಂಟೆಯಾದೊಡನೇ ಧಡ್ ಅಂತ ಎದ್ದು ಹೆಗಲಿಗೆ ಕೆಮರಾ ಬ್ಯಾಗ್ ನೇತು ಹಾಕಿಕೊಂಡು ಸ್ಕೂಟಿ ಕಿವಿ ತಿರುವಿದೆ. ಮನೆಯ ಬಳಿ ಈ ಸೂರಪ್ಪ ಸಿಗಲ್ಲ ಅಂತ…

ಸಂಗಂ ವಿಶ್ವಕವಿ ಸಮ್ಮೇಳನಕ್ಕೆ ಸಂಭ್ರಮದ ತೆರೆ: ‘ಮೂರು ದಿನಗಳ ಕಾವ್ಯಧಾರೆ ಬಳ್ಳಾರಿಯಲ್ಲಿ ಈವರೆಗೆ ಮಾಡಿದ ಪಾಪ ತೊಳೆದಿದೆ’ -ಹಿರಿಯ ಕವಿ, ಸಂಸದ ಡಾ.ಎಲ್ ಹನುಮಂತಯ್ಯ

(ಸಿ.ಮಂಜುನಾಥ) ಬಳ್ಳಾರಿ, ಅ.23:ನಗರದಲ್ಲಿ ಮೂರು ದಿನಗಳ ಕಾಲ ಜರುಗಿದ ಸಂಗಂ ವಿಶ್ವಕವಿ ಸಮ್ಮೇಳನ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ರಾಜ್ಯ, ದೇಶ-ವಿದೇಶಗಳಿಂದ ಆಗಮಿಸಿದ್ದ ಕವಿ-ಕವಯತ್ರಿಯರು, ಕಾವ್ಯಪ್ರಿಯರು ಭಾರವಾದ ಮನಸುಗಳಿಂದ ಬಿಐಟಿಎಂ ಕಾಲೇಜು ಆವರಣದಿಂದ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು. ಸಮಾರೋಪ…

ಎಫ್‌ಕೆಸಿಸಿಐ ವಿಶೇಷ ಆಹ್ವಾನಿತರಾಗಿ ಯಶವಂತ ರಾಜ್ ಆಯ್ಕೆ

ಬಳ್ಳಾರಿ,ಅ.18: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಯಶ್‌ವಂತ್ ರಾಜ್ ನಾಗಿರೆಡ್ಡಿ ಅವರು ಬೆಂಗಳೂರಿನ‌‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ಯ ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ. ೨೦೨೦-೨೩ ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಯಶವಂತ್…

ಎಐಸಿಸಿ ಅಧ್ಯಕ್ಷರ ಚುನಾವಣೆ:ಬಳ್ಳಾರಿಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತದಾನ

ಬಳ್ಳಾರಿ, ಅ.17: ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸೋಮವಾರ ತಮ್ಮ ಹಕ್ಕು ಚಲಾಯಿಸಿದರು. ಸಮೀಪದ ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿರುವ ಭಾರತ್ ಜೋಡೋ ಯಾತ್ರೆ ಕ್ಯಾಂಪ್‌ಸೈಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಡಿ‌.ಕೆ ಸುರೇಶ್ ಅವರೊಂದಿಗೆ ಬಿ.ನಾಗೇಂದ್ರ…