ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಪುನಾರಾಯ್ಕೆಯಾಗಿದ್ದಾರೆ. 2025-28ನೇ ಸಾಲಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾದಂತಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಹಾಸನ…

ಬಳ್ಳಾರಿ ಮೃತ ಪತ್ರಕರ್ತನ ಕುಟುಂಬಕ್ಕೆ 2ಲಕ್ಷ ರೂ ಬಿಡುಗಡೆ ಮಾಡಿದ‌ ಸಿಎಂ

ಬೆಂಗಳೂರು: ಬಳ್ಳಾರಿಯ  ಮೃತ ಪತ್ರಕರ್ತ ವೀರೇಶ್ ಜಿ.ಕೆ.ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ಬಳ್ಳಾರಿ ಬ್ಯೂರೋದಲ್ಲಿ ಉಪ ಸಂಪಾದಕನಾಗಿದ್ದ ವೀರೇಶ್ ಜಿ.ಕೆ. (ವೀರೇಶ್ ಕಟ್ಟೆಮ್ಯಾಗಳ) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಕುಟುಂಬ…

ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್

ಬೆಂಗಳೂರು: ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕ ಓದುವ ಹವ್ಯಾಸವು ದೂರವಾಗಿರುವುದು ವಿಷಾದಕರ. ಪತ್ರಕರ್ತರು ನಿರಂತರವಾಗಿ ಓದುವ ಹವ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ಜ್ಞಾನ ಸಂಪಾದಿಸಿಕೊಂಡು, ವೃತ್ತಿ ಬದ್ಧತೆ ತೋರಿಸಲು ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು. ಕಂದಾಯ ಭವನದಲ್ಲಿರುವ ಕರ್ನಾಟಕ…

ಎಂ ಎಲ್ ಸಿ ಶಿವಕುಮಾರ್ ಕೇವಲ ಬೈಲೈನ್ ಗೆ ಫಿಕ್ಸ್ ಆದ ಪತ್ರಕರ್ತರಲ್ಲ: ಪತ್ರಕರ್ತ ಆಚೆಗೆ ಕ್ರಿಯಾಶೀಲವಾಗಿ ಯೋಚಿಸುವ ರಾಜಕೀಯ ಕಾರ್ಯಕರ್ತ -ಕೆವಿ ಪ್ರಭಾಕರ್ ಮೆಚ್ಚುಗೆ

ಬೆಂಗಳೂರು: ನೂತನ ಎಂ‌ಎಲ್‌ಸಿ ಡಾ.ಶಿವಕುಮಾರ್ ಕೇವಲ ಬೈ ಲೈನ್ ಗಳಿಗಾಗಿ ಸ್ಟೋರಿಗಳನ್ನು ಬರೆಯುವ ಪತ್ರಕರ್ತ ಅಲ್ಲ, ಬದಲಿಗೆ ಪತ್ರಕರ್ತನ‌ ಆಚೆಗೆ ಯೋಚಿಸುವ ಮತ್ತು ಕ್ರಿಯಾಶೀಲವಾಗಿರುವ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ…

ನೂತನ ಎಂಎಲ್ಸಿ ಹಿರಿಯ ಪತ್ರಕರ್ತ ಶಿವಕುಮಾರ್‌ಗೆ ಕೆಯುಡಬ್ಲ್ಯುಜೆ ಅಭಿನಂದನೆ: ಶಿವಕುಮಾರ್‌ಗೆ ಸಾಮಾಜಿಕ ಬದ್ದತೆ ಇದೆ -ಕೆವಿ ಪ್ರಭಾಕರ್

ಬೆಂಗಳೂರು: ಈಚೆಗಷ್ಟೇ  ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತರಾದ ಕೆ.ಶಿವಕುಮಾರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಕುಮಾರ್ ಅವರು, ಎಲ್ಲಾ ಪತ್ರಕರ್ತರೂ ತಮ್ಮ ವೃತ್ತಿ ಬದುಕಿನಲ್ಲಿ ಸಾಮಾಜಿಕ ಬದ್ಧತೆಯ ಕಳಕಳಿಯನ್ನು…

ಹಾಸನದ ತಗಡೂರು ಪ್ರೌಢಶಾಲೆಗೆ 40 ವಸಂತ ತುಂಬಿದ ಸಂಭ್ರಮ: ಸೆ.19ಕ್ಕೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ. -ಶಿವಾನಂದ ತಗಡೂರು ರಾಜ್ಯಾಧ್ಯಕ್ಷರು, ಕೆಯುಡಬ್ಲ್ಯೂಜೆ, ಬೆಂಗಳೂರು

ಹಾಸನ: ಕುಗ್ರಾಮವಾದ  ಹಾಸನ‌ ಜಿಲ್ಲೆಯ ತಗಡೂರಿನಲ್ಲಿ ಪ್ರೌಢಶಾಲೆ ಪ್ರಾರಂಭವಾಗಿ 40 ವಸಂತಗಳು ತುಂಬುತ್ತಿರುವ ಹೊತ್ತಿನಲ್ಲಿ ಅಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸೇರಿ, ಇದೇ ಸೆ.19ರಂದು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶಾಲೆಯಲ್ಲಿ ಪಾಠ ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ…

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು ಭಾರತೀಯ ಪತ್ರಕರ್ತರ ನಿಯೋಗಕ್ಕೆ ಆಹ್ವಾನ -ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್

ಜೇರುಸಲೇಂ: ಇಸ್ರೇಲ್ ನಲ್ಲಿ ನಡೆದಿರುವ ಬೆಳವಣಿಗೆ ಮತ್ತು ವಾಸ್ತವ ಸಂಗತಿಗಳನ್ನು ಹೊರ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಇಸ್ರೇಲ್ ಗೆ ಭಾರತೀಯ ಪತ್ರಕರ್ತರ ನಿಯೋಗವನ್ನು ಆಹ್ವಾನಿಸಲಾಗಿತ್ತು ಎಂದು ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ ತಿಳಿಸಿದರು. ಇದೇ ಸಂದರ್ಭದಲ್ಲಿ ಹಾರ್ಲಿವೈಟ್ಸ್ ಮೆನ್ ಅವರನ್ನು  ದಕ್ಷಿಣ…

ಕೆಯುಡಬ್ಲೂಜೆಯಲ್ಲಿ ವಿಶ್ವ ಪತ್ರಿಕಾ ದಿನಾಚರಣೆ: ಪತ್ರಿಕಾ ವಿತರಕರ ಕೆಲಸ ಮಹತ್ವದ್ದು -ನ್ಯಾ.ಅಶ್ವತ್ಥನಾರಾಯಣಗೌಡ

ಬೆಂಗಳೂರು:ಮನೆ ಮನೆಗೆ ಸುದ್ದಿ ಪತ್ರಿಕೆಗಳನ್ನು ನಿತ್ಯವೂ ತಲುಪಿಸುವ ಪತ್ರಿಕಾ ವಿತರಕರ ಪಾತ್ರ ಬಹಳ ಮಹತ್ವದ್ದು ಎಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಎಚ್.ಅಶ್ವತ್ಥನಾರಾಯಣಗೌಡ ಹೇಳಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೆಯುಡಬ್ಲೂಜೆ ಸಭಾಂಗಣದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ…

ಸೆ. 1 ರಂದು ಹಿರಿಯ ಪತ್ರಕರ್ತ ಪ್ರಜಾಪ್ರಗತಿ ನಾಗಣ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ

ಬೆಂಗಳೂರು: ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿದ ಸುಧೀರ್ಘ ಸೇವೆಗಾಗಿ ತುಮಕೂರು ವಿಶ್ವವಿದ್ಯಾನಿಲಯ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿ(ಹಿರಿಮೆ)ಗೆ ಪಾತ್ರರಾಗಿರುವ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಎಸ್.ನಾಗಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ(ಕೆಯುಡಬ್ಲೂಜೆ) ಅಭಿನಂದನಾ ಕಾರ್ಯಕ್ರಮವನ್ನು ಸೆ.1ರಂದು ಸೋಮವಾರ ಬೆಳಿಗ್ಗೆ 11ಕ್ಕೆ ಕೆಯುಡಬ್ಲೂಜೆ…

ಕೆಯೂಡಬ್ಲ್ಯೂಜೆ ವೇದಿಕೆಯಲ್ಲಿ ‘ಕೂಡ್ಲಿಗಿ ವಿಸ್ಮಯ’ ಅಭಿವೃದ್ಧಿ ಪತ್ರಿಕೋದ್ಯಮ ಕೃತಿ ಬಿಡುಗಡೆ: ವಿಶೇಷ ಗ್ರಾಮೀಣ ವರದಿಗಳು ರಾಜ್ಯಮಟ್ಟದ ಚಿಂತನೆಗೆ ಪೂರಕ -ರವಿ ಹೆಗಡೆ

ಬೆಂಗಳೂರು, ಆ.12: ಸುದ್ದಿ ಗುರುತಿಸುವ ಚಾಕಚಕ್ಯತೆ ವರದಿಗಾರರಲ್ಲಿದ್ದಾಗ ಗ್ರಾಮೀಣ ಪರಿಸರದ ವಿಶೇಷ ವರದಿಗಳು ಕೂಡಾ ಹಲವಾರು ಬಾರಿ ರಾಜ್ಯಮಟ್ಟದ ಚಿಂತನೆಗೆ ಪೂರಕವಾಗುತ್ತದೆ ಎಂದು ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಅಭಿಪ್ರಾಯಪಟ್ಟರು. ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ)…