
ಬಳ್ಳಾರಿ, ಡಿ. 29: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕಕ್ಕೆ ಮಾಜಿ ಸಚಿವರು, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ತಲಾ ಎರೆಡು ಲಕ್ಷ ರೂಗಳ ದೇಣಿಗೆ ನೀಡಿದ್ದಾರೆ.
ಸೋಮವಾರ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಪತ್ರಕರ್ತರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ನಾಗೇಂದ್ರ ಅವರು ಸಮಾರಂಭದಲ್ಲಿಯೇ ಕ್ಷೇಮಾಭಿವೃದ್ಧಿ ನಿಧಿಗೆ ಸ್ಥಳದಲ್ಲಿಯೇ ಹಣ ನೀಡಿ. ಈಬಾರಿ ಪತ್ರಕರ್ತರು ಚುನಾವಣೆ ಮೂಲಕ ಆಯ್ಕೆಯಾಗುವುದರಿಂದ ರಾಜಕಾರಣಿಗಳ ಸಂಕಷ್ಟ ಹೇಗಿರುತ್ತದೆ ಎಂಬುದು ನಿಮಗೂ ಅರ್ಥವಾದಂತಿದೆ ಎಂದು ಹೇಳಿದರು. ಬಳ್ಳಾರಿ ಪತ್ರಕರ್ತರ ಪ್ರಶ್ನೆಗಳು ಸಮಾಜಮುಖಿ ಇರುತ್ತವೆ. ಯಾವುದೇ ಮುಲಾಜಿಲ್ಲದೆ ಪ್ರಶ್ನಿಸುವ ಸ್ವಭಾವ ಸ್ವಾಗತಾರ್ಹ ಎಂದರು.
ಬಳ್ಳಾರಿ ಪತ್ರಕರ್ತರ ಬಗ್ಗೆ ಭಯ, ಭಕ್ತಿ, ಗೌರವ ಇದೆ. ನಿಮ್ಮ ಸಂಘದ ಬೆನ್ನೆಲುಬಾಗಿ ಇರುತ್ತೇವೆ ಜಿಲ್ಲೆಯ ಎಲ್ಕಾ ಜನ ಪ್ರತಿನಿಧಿಗಳು ಸರ್ಕಾರದ ಸೌಲಭ್ಯಗಳನ್ನು ನಿಮಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ.
ಪತ್ರಿಕಾ ಭವನದ ಮೇಲೆ ಸಹೋದರ ಶಾಸಕ ಭರತ್ ಮತ್ತು ನಾನು ಶಾಸಕರ ನಿಧಿಯಿಂದ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು. ಗೆದ್ದವರೂ ಸೋತವರೂ ಎಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಲು ಕೋರಿದರು.
ರಾಜಕೀಯ ಮತ್ತು ಪತ್ರಿಕೋದ್ಯಮ ಜೋಡೆತ್ತುಗಳಿದ್ದಾಗೆ. ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಗೆ ಸಂಕಲ್ಪ ಮಾಡಿದೆ ನಿಮ್ಮ ಸಹಕಾರವೂ ಅಗತ್ಯ ಎಂದರು.
ಸುಳ್ಳು ಸುದ್ದಿಗಳಿಂದ ಮನಸ್ಸಿಗೆನೋವಾಗುತ್ತದೆ ಆ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ನಗರ ಶಾಸಕ ಭರತ್ ರೆಡ್ಡಿ ಅವರು ಕ್ಷೇಮಾಭಿವೃದ್ಧಿಗೆ ಎರೆಡು ಲಕ್ಷ ರೂ ನೀಡುವುದಾಗಿ ಘೋಷಣೆ ಮಾಡಿ, ನೀವಿಲ್ಲದಿರೆ ನಾವಿಲ್ಲ, ನಾವಿಲ್ಲ ದಿದ್ದಿದರೆ ನೀವಿಲ್ಲ ಎಂಬಂತೆ ಕೆಲಸ ಮಾಡಿದಾಗ ಸಮಾಜಕ್ಕೆ ಒಳಿತಾಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ಅನೇಕ ಅಡ್ಡಿ ಆತಂಕಗಳು ಇರುತ್ತವೆ ಅವನ್ನು ಮೀರಿ ಕೆಲಸ ಮಾಡಲಾಗುತ್ತಿದೆಂದರು.
ಹೊಸ ವರ್ಷದಲ್ಲಿ ನಾಗೇಂದ್ರ ಅಣ್ಣ ಅವರು ಸಚಿವರಾಗುತ್ತಾರೆ, ಆನಂತರ ಇದು ಸುವರ್ಣ ಬಳ್ಳಾರಿಯಾಗುವುದರಲ್ಲಿ ಅನುಮಾನ ಇಲ್ಲ. ಪತ್ರಿಕಾ ಭವನದ ಅಭಿವೃದ್ದಿಗೆ ಅಗತ್ಯವಾದಷ್ಟು ಅನುದಾನ ನೀಡಲಿದೆಂದು ಹೇಳಿದರು.
ವಾರ್ತಾ ಇಲಾಖೆಯ ಅಧಿಕಾರಿ ಗುರುರಾಜ್ ಮೊದಲಾದವರು ಇದ್ದರು.
