ಅನುದಿನ ಕವನ-೬೬೩, ಕವಿ: ಪಿ ಬಿ ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ದೀಪಾವಳಿ

ದೀಪಾವಳಿ

ಕಂದನ ಕಲರವದಲ್ಲಿ
ಅಂಧನ ಅರಿವಿನಲ್ಲಿ
ಚೆಂದನ ಚೆಲುವಿನಲ್ಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

ತಾಯಿಯ ಪ್ರೀತಿಯಲ್ಲಿ
ತಂದೆಯ ನೀತಿಯಲ್ಲಿ
ಬಂಧುಗಳ ಸಾಥಿನಲ್ಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

ವೀಣೆಯ ರಾಗದಲ್ಲಿ
ಭಾನುವಿನ ಯೋಗದಲ್ಲಿ
ತನುವಿನ ತನ್ಮಯತೆಯಲ್ಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

ವೈದ್ಯನ ಹೃದಯದಲಿ
ಬದ್ಧನ ಸುದಯದಲಿ
ಸಿದ್ಧಿಪುರುಷರ ಪಾದದಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

ಅಂಗಳದ ದೀಪದಲ್ಲಿ
ಕಂಗಿನ ಕಾಂತಿಯಲ್ಲಿ
ಮಂಗಳಮಯ ಜಂಗಮನಲ್ಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

ಹೆಂಡತಿಯ ದಂತಪಂಕ್ತಿಯಲ್ಲಿ
ಪಂಡಿತನ ಪಂಥದಲ್ಲಿ
ಖಂಡಿತನ ನಂಬುಗೆಯಲ್ಲಿ
ಬೆಳಗುತಿದೆ ಚೆಂಬೆಳಕಿನ ದೀಪಾವಳಿ

-ಪಿ ಬಿ ಕೋಟೂರ, ಬೆಂಗಳೂರು
*****

Leave a Reply

Your email address will not be published. Required fields are marked *