ಅನುದಿನ ಕವನ-೧೧೫೯, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ನೀಲಿ ಗಗನ

ನೀಲಿ ಗಗನ…

ನೀಲಿ ಗಗನ
ನಮಗೆ ಸ್ವಾಭಿಮಾನ
ತುಂಬಿದ ನಮ್ ಯಜಮಾನ
ನಿಮಗೆ ಕೋಟಿ ನಮನ
ನೀವೆ ನಮ್ಮ ಜನ
ಕಾಯುವ ನಮ್ ಯಜಮಾನ
ನೀನೆ ಬಾಬಾ ಅಂಬೇಡ್ಕರ
ನಮ್ಮ ಯಜಮಾನ ಬಾಬಾ ಅಂಬೇಡ್ಕರ
ಜೈ ಭೀಮ ಬಾಬಾ ಸಾಹೇಬ ಅಂಬೇಡ್ಕರ…

ನಿಮ್ಮ ಸಂವಿಧಾನ ಆಸರೆ
ನಮ್ಮ ಕಾಯುತಿರುವ ನೇರಳೆ
ನಮ್ಮ ಚೆಂದ ಬದುಕಿನ ದೊರೆ
ಜೈಭೀಮ್ ನಮ್ಮ ಕಹಳೆ
ಎಲ್ಲರ ರಕ್ಷಣೆಮಾಡಿದ ನಮ್ಮಯಜಮಾನ ಅಂಬೇಡ್ಕರ
ನಮ್ಮ ಯಜಮಾನ ಅಂಬೇಡ್ಕರ…

ಸಮಸಮಾಜದ ಶಿಲ್ಪಿ
ಕರುಣೆ ಮೈತ್ರಿ ಬುದ್ದನ ಪ್ರೀತಿ
ಮಹಾಮಾನವತಾವಾದಿ
ಎಲ್ಲರು ಒಂದೆಂಬ ನೀತಿ
ಸಾರಿದ ವಿಶ್ವಮಾನವ ನಮ್ಮ ಯಜಮಾನ ಅಂಬೇಡ್ಕರ
ನಮ್ಮ ಯಜಮಾನ ಅಂಬೇಡ್ಕರ….


-ಸಿದ್ದುಜನ್ನೂರ್, ಚಾಮರಾಜ ನಗರ
—–

Leave a Reply

Your email address will not be published. Required fields are marked *