ಬಳ್ಳಾರಿ: ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದ ರೆಡ್ಡಿ ಪೇಟೆಯ ಮಠದ ಆವರಣದಲ್ಲಿ ಶ್ರೀವಿನಾಯಕ ಮಿತ್ರ ಮಂಡಳಿಯಿಂದ ಆಯೋಜಿಸಿದ್ದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾಸಂಘ ಹಂದ್ಯಾಳು ತಂಡದಿಂದ ದಿ. ಶಂಕರನಾಯ್ಡು ರಚನೆಯ, ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಅಭಿನಯಿಸಿದ ದನಕಾಯೋರ ದೊಡ್ಡಾಟ ಹಾಸ್ಯಭರಿತ ನಾಟಕ ನೆರೆದಿದ್ದ ಪ್ರೇಕ್ಷಕರ ಮನ ಸೂರೆಗೊಂಡಿತು.
ಈ ನಾಟಕದಿಂದ ಪ್ರತಿಯೊಬ್ಬರು ಅಕ್ಷರ ಕಲಿಯಬೇಕು ಎಂಬ ಸಂದೇಶವನ್ನು ಜನರಲ್ಲಿ ಮೂಡಿಸಿತು.
ಅಕ್ಷರ ಕಲಿಯಬೇಕು ಎಂಬ ಅರಿವು ಮೂಡಿಸಿದ್ದಲ್ಲದೆ, ಈ ನಾಟಕವನ್ನು ವೀಕ್ಷಿಸಲು ನೆರೆದಿದ್ದ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿತು.
ಸಾರಥಿ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳ್, ಗೌಡನ ಪಾತ್ರದಲ್ಲಿ ಬಿ.ನಾಗರಾಜ ರೆಡ್ಡಿ ಕರೂರು, ಗಣಪತಿ ಪಾತ್ರದಲ್ಲಿ ಕಪ್ಪಗಲ್ಲು ಚಂದ್ರಶೇಖರ ಆಚಾರ್, ದುರ್ಯೋಧನ ಪಾತ್ರದಲ್ಲಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನ ಪಾತ್ರದಲ್ಲಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ, ನೃತ್ಯ ಗಾರ್ತಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ಭೀಮಸೇನ ಪಾತ್ರದಲ್ಲಿ ಹೊಸಯರಗುಡಿ ಸುಂಕಣ್ಣ, ನಕುಲ, ಸಹದೇವ ಪಾತ್ರದಲ್ಲಿ ಯರ್ರಿಸ್ವಾಮಿ ಆಚಾರ್, ಲಿಂಗಪ್ಪ ಹಂದ್ಯಾಳು, ಕೃಷ್ಣನ ಪಾತ್ರದಲ್ಲಿ ಕುಮಾರಗೌಡ ಅಭಿನಯಿಸಿದರು.
ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂ, ಗಾದಿಲಿಂಗಪ್ಪ ಅಮರಾಪುರ ತಬಲಾ ಸಾಥ್ ನೀಡಿದರು.