ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸ್ಪಷ್ಟನೆ: ವಾಹನಗಳಿಗೂ ರಾಷ್ಟ್ರಧ್ವಜ ಅಳವಡಿಸಿ ಸಂಭ್ರಮಿಸಿ

ಬಳ್ಳಾರಿ,ಜ.14: ಗಣರಾಜ್ಯೋತ್ಸವದ ಅಂಗವಾಗಿ ವಾಹನಗಳಿಗೂ ಕೂಡ ಧ್ವಜಸಂಹಿತೆ ಪಾಲಿಸಿಕೊಂಡು, ರಾಷ್ಟ್ರ ಧ್ವಜವನ್ನು ಅಳವಡಿಸಿ, ಸಂಭ್ರಮಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಾಹನಗಳಿಗೆ ರಾಷ್ಟ್ರಧ್ವಜ ಕಟ್ಟಲು ನಿರ್ಬಂಧಿಸಲಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ವಾಹನಗಳಿಗೆ ರಾಷ್ಟ್ರ ಧ್ವಜ ಕಟ್ಟಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಆದರೆ ಧ್ವಜ ಸಂಹಿತೆ ಪಾಲಿಸದೆ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿ ಯಾರೂ ಕೂಡ ರಾಷ್ಟç ಧ್ವಜ ಬಳಸಬಾರದು. ರಾಷ್ಟ್ರ ತ್ರಿವರ್ಣ ಧ್ವಜಗಳನ್ನು ಬಳಸುವಲ್ಲಿ, ಧ್ವಜ ಸಂಹಿತೆ ಪಾಲಿಸಿಕೊಂಡು, ಸಾರ್ವಜನಿಕರು ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ, ವಾಹನಗಳಲ್ಲಿಯೂ ರಾಷ್ಟ್ರಧ್ವಜವನ್ನು ಅಳವಡಿಸಿ, ಗಣರಾಜ್ಯೋತ್ಸವವನ್ನು ಸಂಭ್ರಮಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸ್ಪಷಪಡಿಸಿದ್ದಾರೆ.
————

Leave a Reply

Your email address will not be published. Required fields are marked *