ಅಷ್ಟು ಸುಲಭಕ್ಕೆ ನೀನು
ಸೋಲುವುದಿಲ್ಲ ಈ ಕವಿತೆಯ ಆಗೆ…
ಯಾರದೋ ನೋವಿಗೆ ಮುಲಾಮು ಈ ಕವಿತೆ
ಓದಿದಷ್ಟು ಮತ್ತೆ ಮತ್ತೆ
ಎಲ್ಲವೂ ಬಗೆಹರೆದ ಆಗೆ
ಕುವೆಂಪು ಕವಿಶೈಲದ ಹಕ್ಕಿಯ ಹಾಡು
ಊರೂರಿಗೆ ಸಾಗುವ ಆಗೆ
ಹಸಿರು ಕಾನನದ ಗಿರಿ ಶೃಂಗಾರ
ಕವಿಯ ಕವಿತೆಗೆ ಸಾವಿಲ್ಲ
ಮತ್ತೆ ಮತ್ತೆ ಹುಟ್ಟುವ ಪದೊತ್ಕರ್ಷಕ್ಕೆ ನೀವೆ ಸಾಕ್ಷಿ…
ಈ ಕವಿತೆಯ ವೇಗಕ್ಕೆ ಚಾಲಕ ಕವಿ
ತನ್ನದೆ ದಾರಿ ತನ್ನದೆ ಕಲ್ಪನೆ
ತಿರುಗುತ್ತಾನೆ ಊರು ಕೇರಿ ಹಳ್ಳಿ ಗಲ್ಲಿ ವಠಾರ
ಕಂಡದ್ದು ಕಾಣದ್ದು ಎಲ್ಲವೂ ಅವನ
ಕೈ ಚಳಕದ ಮುಂದೆ ಸಾಗುತ್ತದೆ ಪದವಾಗಿ
ಮತ್ತೊಂದು ಹೃದಯಕ್ಕೆ ಬಡಿತವಾಗಿ
ಖಾಲಿ ಹಾಳೆಯ ಮೇಲೆ ಖಾತರಿಯಾಗುತ್ತ
ಬಿಡುಗಡೆಗೊಳ್ಳುತ್ತದೆ ವೇದಿಕೆಗಳಲ್ಲಿ
ಹೊಗಳಿಕೆ ತೆಗಳಿಕೆ ಎಲ್ಲವನ್ನು ಗೊತ್ತು ಪಡಿಸಿಕೊಂಡು
ವಿಳಾಸವಿಲ್ಲದ ಕವಿಯ ಕೈ ಸೇರಿ
ಮತ್ತೆ ಮತ್ತೆ ಹೋಗುತ್ತದೆ ಮುಂದಿನ ನಿಲ್ದಾಣಕ್ಕೆ..

-ಸಿದ್ದು ಜನ್ನೂರ್, ಚಾಮರಾಜ ನಗರ
