ಬಿಜಾಪುರ, ಫೆ.3: ಮೇ ಸಾಹಿತ್ಯ ಮೇಳ ಬಳಗದ ಆಶ್ರಯದಲ್ಲಿ, ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜನ್ಮದಿನಗಳ ನಿಮಿತ್ಯವಾಗಿ ಒಂದು ವಾರದ “ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಪುಸ್ತಕ ಮೇಳ” ವನ್ನು ಏಪ್ರಿಲ್ ತಿಂಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ವಿಜಾಪುರ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಭಾನುವಾರ ನಡೆದ ಮೇ ಸಾಹಿತ್ಯ ಮೇಳ ಬಳಗ ಮತ್ತು ವಿವಿಧ ದಲಿತ, ಪ್ರಗತಿಪರ ಮತ್ತು ಸಮಾನ ಮನಸ್ಕ ಗೆಳೆಯರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸಂಗಾತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಇವತ್ತಿನ ಸಂದರ್ಭದಲ್ಲಿ ಯುವಕರಲ್ಲಿ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಓದಿನ ಹವ್ಯಾಸ ಬೆಳೆಸುವಲ್ಲಿ ಇಂಥ ಪುಸ್ತಕ ಮೇಳ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತ ಎಂದು ಹೇಳಿದರು.
‘ಅಂಬೇಡ್ಕರ್ ಹಬ್ಬ’ದ ಜೊತೆಜೊತೆಗೆ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಬೇಕು ಮತ್ತು ಕೇವಲ ಕನ್ನಡ ಪುಸ್ತಕಗಳು ಮಾತ್ತವಲ್ಲ, ಇಂಗ್ಲೀಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ಪುಸ್ತಕಗಳು ಕೂಡ ಲಭ್ಯವಾಗುವಂತಿರಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬರುತ್ತಿರುವುದು ಸತ್ಯವೆಂದು ನಂಬುತ್ತಿರುವ ಯುವಪೀಳಿಗೆಗೆ ನಿಜವಾದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಪುಸ್ತಕಮೇಳ ನಡೆಸುವುದು ಅಗತ್ಯವಾಗಿದ್ದು, ಇದರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್, ಕಾನ್ಷಿರಾಂ ಚಿಂತನೆಯ ಮತ್ತು ಎಡ ಮತ್ತು ದಲಿತ, ಮಹಿಳಾಪರ ಸಾಹಿತ್ಯದ ಪುಸ್ತಕಗಳನ್ನು ಮಾತ್ರ ಆಹ್ವಾನಿಸಬೇಕು. ಹಾಗೆಯೇ ನಿತ್ಯವೂ ಮಹತ್ವದ ಪುಸ್ತಕಗಳ ಓದು ಮತ್ತು ಸಂವಾದ ಹಮ್ಮಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಪ್ರಚಾರ ಕೈಕೊಂಡು, ಹೆಚ್ಚೆಚ್ಚು ಜನರು ಮೇಳದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಹೆಚ್ವು ಜನರಿಗೆ ಪುಸ್ತಕಗಳು ತಲುಪುವಂತೆ ಮಾಡಬೇಕು. ಕನಿಷ್ಠ 50 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು ಮತ್ತು ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಪುಸ್ತಕಗಳ ಪರಿಚಯ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲಾ ಶಾಲೆ ಕಾಲೇಜುಗಳನ್ನು ಸಂಪರ್ಕಿಸಿ ಆಹ್ವಾನ ನೀಡಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.
ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಒಂದು ಸಂಚಾಲನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಪ್ರಧಾನ ಸಂಚಾಲಕರು:
* ಅನಿಲ ಹೊಸಮನಿ
* ರಾಜಶೇಖರ ಯಡಹಳ್ಳಿ
* ಭಗವಾನ ರೆಡ್ಡಿ
ಸಂಚಾಲಕರು:
* ಪುಲಕೇಶಿ ಚೌಧರಿ
* ಜಿ.ಜಿ. ಗಾಂಧಿ
* ಅಡಿವೆಪ್ಪ ಸಾಲಗಲ್ಲ
* ನಾಗರಾಜ ಲಂಬು
* ಶ್ರೀನಾಥ ಪೂಜಾರಿ
* ಬಸವರಾಜ ಹೋಳ್ಕರ
* ಸಂಜು ಕಂಬಾಗಿ
* ಸುರೇಶ ಜೀಬಿ
* ಎಲ್.ಬಿ. ಸಜ್ಜನ
* ಪ್ರಭುಗೌಡ ಪಾಟೀಲ
* ಲಲಿತಾ ಬಿಜ್ಜರಗಿ
* ಸುಭಾಸ ಹೊನ್ನಕಂಟಿ
* ಚೆನ್ನು ಕಟ್ಟಿಮನಿ
* ಗೌಡಪ್ಪ ಬಡಿಗೇರ
* ಮಹಾದೇವ ಬನಸೋಡೆ
* ಫಾ. ಕೆವಿನ್
* ಓಂಕಾರ ಕಾಕಡೆ
ಪ್ರತಿ ತಾಲೂಕಿನಿಂದ ಐದು ಜನರನ್ನು ಆಯ್ಕೆ ಮಾಡಿಕೊಂಡು ವ್ಯಾಪಕ ಪ್ರಚಾರ ಕೈಕೊಳ್ಳುವ ಅಧಿಕಾರವನ್ನು ಸಂಚಾಲನ ಸಮಿತಿಗೆ ನೀಡಲಾಯಿತು. ಮುಂದಿನ ಸಭೆ: ಫೆ. 15 ರಂದು ಎರಡನೆಯ ಸಭೆಯನ್ನು ಬುದ್ಧವಿಹಾರದಲ್ಲಿ ಕರೆಯಲು ತೀರ್ಮಾನಿಸಲಾಯಿತು ಮತ್ತು ಪುಸ್ತಕ ಮೇಳಕ್ಕೆ ತಗಲುವ ಅವಶ್ಯಕ ವ್ಯವಸ್ಥೆ ಮತ್ತು ಅದಕ್ಕೆ ಅಂದಾಜು ವೆಚ್ಚವನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ತಿಳಿಸಲು ಸಂಚಾಲನ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು.
—–
ಸಭೆಯಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಗದಗದ ಮೇ ಸಾಹಿತ್ಯ ಮೇಳ ಬಳಗದ ಮುತ್ತು ಬಿಳೆಯೆಲಿ, ರಮೇಶ ಕೋಳೂರ, ರಾಮಚಂದ್ರ ಹಂಸನೂರ, ಆನಂದ ಸಿಂಗಾಡಿ, ಚೆನ್ನು ಕಟ್ಟಿಮನಿ, ಅರವಿಂದ ಲಂಬು, ಸಲೀಮ ಹೊಕ್ರಾಣಿ, ಮನೋಹರ ಕಾಂಬಳೆ, ಲಿಂಗರಾಜ ಬಿದರಕುಂದಿ, ವೈ.ಎಚ್. ಲಂಬು, ರಾಜೇಂದ್ರ ಕೊಂಡಗೂಳಿ, ರವೀಂದ್ರ ಬೆಳ್ಳಿ, ಅಪ್ಪಾಸಾಹೇಬ ಚಿನಗುಂಡಿ, ಪ್ರಮೋದ ಬರಡ್ಡಿ, ಸಂಗಮೇಶ ಸಿದರೆಡ್ಡಿ, ಸಾಹೇಬಲಾಲ ನದಾಫ, ಬಾಲಾಜಿ ಕಾಂಬಳೆ, ಯಮನಪ್ಪ ಗುಣಕಿ, ರಮೇಶ ಹೊಸಮನಿ, ನಿಂಗಮ್ಮ ಹೊಸಮನಿ, ರಾಜೇಶ ಚಲವಾದಿ, ದಲೀಪ ಮೌರ್ಯ, ರಾಜೇಶ ತೊರವಿ ಮುಂತಾದವರು ಉಪಸ್ಥಿತರಿದ್ದರು.
ಮುಂದಿನ ಸಭೆ
ದಿ. 15-2-2026 ರಂದು ಎರಡನೆಯ ಸಭೆಯನ್ನು ಬುದ್ಧವಿಹಾರದಲ್ಲಿ ಕರೆಯಲು ತೀರ್ಮಾನಿಸಲಾಯಿತು ಮತ್ತು ಪುಸ್ತಕ ಮೇಳಕ್ಕೆ ತಗಲುವ ಅವಶ್ಯಕ ವ್ಯವಸ್ಥೆ ಮತ್ತು ಅದಕ್ಕೆ ಅಂದಾಜು ವೆಚ್ಚವನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ತಿಳಿಸಲು ಸಂಚಾಲನ ಸಮಿತಿಗೆ ಜವಾಬ್ದಾರಿ ವಹಿಸಲಾಯಿತು.
—–
