ಮನುಷ್ಯರಿಗೆ ನಿಜವಾಗಿಯೂ
ಪ್ರೀತಿಸುವುದನ್ನು
ಹೇಳಿಕೊಟ್ಟವನು ಬುದ್ಧ
ಅದಕ್ಕೆ ಅವನು ಮತ್ತೆ ಮತ್ತೆ
ಸಮಾನತೆಯನ್ನು ಬೋಧಿಸಿದ…
ಎಲ್ಲರು ದ್ವೇಷದ ನಶೆಯಲ್ಲಿದ್ದಾಗ
ಅದಕ್ಕೆ ಪ್ರೀತಿಯ
ಔಷಧವಾಗಿ ಬಂದವನು ಬುದ್ಧ
ಅದಕ್ಕೆ ಅವನು ಮತ್ತೆ ಮತ್ತೆ
ಪ್ರೀತಿಯನ್ನು ಬೋಧಿಸಿದ…
ಎಲ್ಲರೂ ಮೌಢ್ಯದ ಸಂಕೋಲೆಗೆ ಬಿದ್ದು
ಬೆಟ್ಟಗುಡ್ಡ ಮರ ಗೋಡೆಗಳ ಬಳಸುವಾಗ
ಮೌನವಾಗಿ ಬುದ್ಧ ನಕ್ಕು
ಮಾನವೀಯ ಪ್ರೀತಿಯನ್ನು ಬೋಧಿಸಿದ…

-ಸಿದ್ದು ಜನ್ನೂರ್, ಚಾಮರಾಜನಗರ
