ಅನುದಿನ ಕವನ-೧೮೮೪, ಕವಯತ್ರಿ: ಡಾ. ಸಿ. ಸುಜಾತಾ ಚಲವಾದಿ, ಕವನದ ಶೀರ್ಷಿಕೆ: ಒಡಲ‌ ಮನೆ

ಒಡಲ ಮನೆ

ನೂರಾರು ಮಕ್ಕಳ ಹೆತ್ತೊಡಲು
ಆಸೆಗನಸನು ಹೊತ್ತು
ಚಿಗುರೆಲೆಗೆ ಬಂಗಾರದ ಲೇಪನ ಹಚ್ಚಿ
ಅಗುಳಿನ ಚೀಲ ತುಂಬುವಳು

ತೊದಲನುಡಿಗಲಿಸಿ ಕುಡಿನೊಟದಿ
ತೋಳತೆಕ್ಕಿನಲ್ಲಿ ಅಪ್ಪಿಮುದ್ದಾಡಿ
ಲಾಲಿತ್ಯದ ಕಣಜವನ್ನು ಹೃದಯದಿಂದ
ತುಂಬಿ ಮೆರೆಸಿ ಬೀರುನಗೆ ಬೀರುವಳು

ಕರುಳ ಕುಡಿಗಾಗಿ ಕುಳ್ಳೊಟುತ್ತ
ಶ್ರಮಕೆ ಬೇವರ ಸುರಿಸುವಳು
ಮುಳ್ಳಿನ ಹಾದಿ ತುಳಿದರು
ಹೂವಿನ ಹಾಸಿಗೆಯಲಿ
ತನಕಂದ ನಸುನಗುತ ಇರಲೇಂದು
ಶಿವನಲ್ಲಿ ಮೊರೆಹೊದವಳು

ಬೀಳಿ ಪುಟಗಳಲಿ ಕೆಂಪು ಶಾಹಿಯ
ಲೇಪನ ಬಳಿದರು ಒಡಲೊಳಿಂಚು
ಅಸಮಾಧಾನ ತೊರದೆ ಹುಣ್ಣಿಮೆಯ
ಚಂದ್ರನ ಹಾಲಬೆಳದಿಂಗಳಾದವಳು

ಬೊಗಸೆಯ ಮಾರ್ದನಕ್ಕೆ
ಆಳೆತ್ತರದ ಗೊಪುರಗಟ್ಟಿ
ಆಕಾಶದೆತ್ತರಕ್ಕೆ ಪುಟಿಯುವಂತೆ
ಶಕ್ತಿ ನೀಡಿ ದೂರ ನಿಂತು
ವಿಜೃಂಭಣಿಗೆ ಸಾಕ್ಷಯಾಗಿ ನಿಲ್ಲುವಳು

ತಂಪೇರೆಯುವ ತಂಗಾಳಿಗೆ
ಹೇಳಿ ಕಳಿಸುವಳು ಅವಳೇ
ಬಿರುಗಾಳಿಯಾಗಿ ಎಂದೂ ಬರದಿರು
ನೀ ಯಾವತ್ತು ನನ್ನಕುಡಿಗಳಲ್ಲಿ ಚೇತನವೆಂದು

ಬದುಕಲಿ ಗೊತ್ತಗದೆ ಎದ್ದ ಬೀರುಗಾಳಿಗೆ ಸುನಾಮಿಯಾಗಿ ನಿಲ್ಲುವಳು
ಬದುಕಿನ ಬವಣಿಗೆ ಹಿಡಿ ಶಾಪಹಾಕಿ
ಮುತ್ತುಗದ ಮುತ್ತಾಗಿಹಳು

ಸುತರ ಮರೆತ ಕ್ಷಣದಲ್ಲಿ ಜೀವಜೀವಾಳವೇ
ಕಳಚಿದಂತೆ ಮರುಗುವಳು
ಜೀವವೇ ಸಮಾಧಿಯಾಗಿಸಿ
ಸಮಾಧಾನಿಯಾಗಿಹಳು
ಇವಳಿಗೆಲ್ಲಿ ತನ್ನದೇ ಒಡಲಮನೆ
ನಿಮಗೆ ಗೊತ್ತಿದ್ದರೆ ಹೇಳುವಿರಾ?


-ಡಾ.ಸುಜಾತಾ ಚಲವಾದಿ
ವಿಜಯಪೂರ

Leave a Reply

Your email address will not be published. Required fields are marked *