ಬಳ್ಳಾರಿ: ಜೆಸ್ಕಾಂ ಜಾಗೃತಿದಳದ ಸಿಪಿಸಿ ವೀರೇಶ್ ಗೆ ಉತ್ತಮ ಸೇವಾ ಪ್ರಮಾಣ ಪತ್ರ ಪ್ರದಾನ

ಬಳ್ಳಾರಿ, ಮೇ 26: ನಗರದ ಜೆಸ್ಕಾಂ ಜಾಗೃತಿದಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪಿಸಿ (ಪೊಲೀಸ್ ಕಾನ್ ಸ್ಟೇಬಲ್) ವೀರೇಶ್ ಅವರಿಗೆ ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ದೊರೆತಿದೆ.

ಉತ್ತಮ ನ್ಯಾಯಾಲಯ ಕರ್ತವ್ಯ ನಿರ್ವಹಣೆ ಹಾಗೂ ಅತೀ ಹೆಚ್ಚು ಕೇಸು ರಿಕವರಿ ಮಾಡಿರುವ ಗಮನಾರ್ಹ ಸೇವೆಗಾಗಿ ಕಲಬುರಗಿಯ ಜೇಸ್ಕಾಂ ಜಾಗೃತಿದಳದ
ಪೊಲೀಸ್ ಅಧಿಕ್ಷಕರು
ಉತ್ತಮ ಸೇವಾ ಪ್ರಮಾಣ ಪತ್ರ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜೆಸ್ಕಾಂ ಜಾಗೃತಿ ದಳದ ಪ್ರಭಾರಿ ಎಸ್.ಪಿ ಸುಜಿತ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *