ಸಂಡೂರು: ತಾಲೂಕಿನ ಕುರೆಕುಪ್ಪ ಗ್ರಾಮದ ಎಬೆನೆಜರ್ ಮಿನಿಸ್ಟ್ರೀಸ್ ಕೇಂದ್ರ ಚರ್ಚ್‌ನಲ್ಲಿ ಈಚೆಗೆ ನೂತನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಚರ್ಚ್ ಫಾದರ್ ಹೊನ್ನೂರಪ್ಪ ಹೆಚ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಅವರು ಸಾಹಿತ್ಯ ಮತ್ತು ಸ್ವರಕಲ್ಪನೆಯಲ್ಲಿ “ಬಳಲಿದ ಈ ಮನಸ್ಸಿಗೆ ನೀನೇ ಆಧಾರವು” ಎಂಬ ನೂತನ ಆಡಿಯೋ ಮತ್ತು ವಿಡಿಯೋ ಸಾಂಗ್ ನ್ನು ಭಕ್ತಿ ಸಮರ್ಪಣೆಯೊಂದಿಗೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫಾ. ಹೊನ್ನೂರಪ್ಪ ಅವರು ಇಂದಿನ ದಿನಗಳಲ್ಲಿ ಕಷ್ಟ, ಕಣ್ಣೀರು ಮತ್ತು ನೋವಿನಲ್ಲಿ ಬಳಲುತ್ತಿರುವ ಜನರಿಗೆ ಈ ಹಾಡು ಸಾಂತ್ವನದ ಸಂದೇಶ ನೀಡಲಿದೆ ಎಂದರು. ದೇವರಲ್ಲಿ ಇಟ್ಟ ನಂಬಿಕೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ಈ ಹಾಡಿನ ಮುಖ್ಯ ಸಂದೇಶವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಉಮೇಶ್ ಸೇರಿದಂತೆ ಚರ್ಚ್ ಸದಸ್ಯರು ಮತ್ತು ಕುಟುಂಬದವರು ಉಪಸ್ಥಿತರಿದ್ದರು.
