ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಅಂತಿಮ‌ ಕಣದಲ್ಲಿ ಏಳು ಜನ, ಸಿದ್ಧರಾಮ ಕಲ್ಮಠ ನಾಮಪತ್ರ ವಾಪಾಸು

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಬಳ್ಳಾರಿ‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯುವ ಚುನಾವಣಾ ಅಂತಿಮ ಕಣದಲ್ಲಿ ಏಳು ಜನ ಅಭ್ಯರ್ಥಿಗಳಿದ್ದಾರೆ.
ನಾಮ ಪತ್ರ ವಾಪಾಸು ಪಡೆಯಲು ಸೋಮವಾರ ಮಧ್ಯಾಹ್ನ ಮೂರು ಗಂಟೆ ವರೆಗೆ ಅವಕಾಶವಿದ್ದು, ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ವಾಪಾಸು ಪಡೆದರು ಎಂದು ಕಸಾಪ ಸಹಾಯಕ ಚುನಾವಣಾಧಿಕಾರಿ ಶಿವಲಿಂಗಾರೆಡ್ಡಿ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿದರು.
ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳು: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಿ.ಮಂಜುನಾಥ್, ಕಸಾಪ‌ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಲೇಖಕಿ ವಿನೋದ ಕರ್ಣಂ, ರಂಗಕರ್ಮಿ ಕೆ. ಜಗದೀಶ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಪಂಪಾಪತಿ ಟಿ ಎಂ, ಕೃಷ್ಣಪ್ಪ ಗುಣಸಾಗರ ಮತ್ತು ಅರುಣ್ ಕುಮಾರ್

*****
*

Leave a Reply

Your email address will not be published. Required fields are marked *