ಅನುದಿನ‌ ಕವನ-೧೪೧, ಕವಿ:ಎನ್‌.ಶರಣಪ್ಪ ಮೆಟ್ರಿ,ಗಂಗಾವತಿ, ಕವನದ ಶೀರ್ಷಿಕೆ: ನೆಮ್ಮದಿ ಬದುಕಿಗೆ ಸೂತ್ರಗಳು

ನೆಮ್ಮದಿ ಬದುಕಿಗೆ ಸೂತ್ರಗಳು
*****
ಹಿಂದಿನ ದಿನಗಳ ಮರೆತುಬಿಡು
ಮುಂದಿನ ದಿನಗಳ ಚಿಂತೆಬಿಡು
ಹಿಂದುಮುಂದುಗಳ ಯೋಚಿಸದೆ
ಇಂದೇ ಈಕ್ಷಣ ಹರುಷಪಡು

ಮಂದಿಯ ಮಾತನು ಕೇಳದಿರು
ನಿಂದಿಸಿದರೆ ನೀ ನಗುತಲಿರು
ಎಂದಿಗು ಮಾಡದೆ ಕೋಪವನು
ಕಂದನ ತೆರದಲಿ ಶಾಂತನಿರು

ಕುಜನರ ಸಂಗವ ಬಿಟ್ಟುಬಿಡು
ಸುಜನರ ಗೆಳೆತನ ಕಟ್ಟಿಬಿಡು
ಭಜಿಸುತ ದೇವನ ನಿತ್ಯದಲಿ
ನಿಜಗುಣವುಳ್ಳವನಾಗಿಬಿಡು

ಜನನಿಜನಕರನು ಸಲುಹುತಿರು
ಘನಗುರು ಸೇವೆಯ ಮಾಡುತಿರು
ದಾನಧರ್ಮಗಳ ನೀ ಬಿಡದೆ
ಧ್ಯಾನಮೌನದಲಿ ಮುಳುಗುತಿರು

-ಎನ್‌.ಶರಣಪ್ಪ ಮೆಟ್ರಿ,ಗಂಗಾವತಿ

Leave a Reply

Your email address will not be published. Required fields are marked *