ಅನುದಿನ‌ ಕವನ-೫೧೧, ಕವಿ: ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು

ಕಣ್ಣಂಚಿನಲಿ
ಪಿಸಿರು ಕಟ್ಟಿದೆ..,
ಎದೆಯೊಳಗೇನೋ
ಅತ್ತ ಕುರುಹು..,
ನಿಲ್ದಾಣಗಳ ದಾಟಿ ಹೋದ
ಅವಳ ಹೆಜ್ಜೆಗಳ
ಗುರುತು ಕಾಣದೆ
ಕತ್ತೆತ್ತಿ ಆಕಾಶ ನೋಡಿದೆ
ಅಗಲಿಕೆ ನೋವ
ಒಳಹರಿವು ಹೆಚ್ಚಿ
ಕಣ್ಣೀರಿನ
ನಾಲ್ಕು ಬಿಂದುಗಳು
ಕೆನ್ನೆಯ ದಾಟಿ
ಎದೆಯ ಮೇಲೆ ತೊಟ್ಟಿಕ್ಕಿ…,
ಉಸಿರನ್ನು ಸಂತೈಸಲು
ಹವಣಿಕೆಯ ಹಾದಿ ಹಿಡಿದಿವೆ..,
ಹಿಂದಿರುಗಿ ನಡೆದು
ಬಂದಾಗಲೂ
ಅಡಿಗಡಿಗೆ ಸಿಕ್ಕಿದ್ದು
ಅವಳ
ನೆನಪುಗಳು ಮಾತ್ರ…,

-ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು

Leave a Reply

Your email address will not be published. Required fields are marked *