ಬಳ್ಳಾರಿ: ಒಳಚರಂಡಿ ಕಾಮಗಾರಿ‌ ಪರಿಶೀಲಿಸಿದ ಗ್ರಾಮೀಣ ಶಾಸಕ ಬಿ.ನಾಗೇಂದ್ರ

ಬಳ್ಳಾರಿ, ಸೆ. 12:ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಲ್ ಬಜಾರನ 28 ಮತ್ತು 29ನೇ ವಾರ್ಡ್ ಗಳಲ್ಲಿ ಒಳಚರಂಡಿ ಪೈಪ್ ಬ್ಲಾಕ್ ಆಗಿದ್ದು ಹೊಸ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ‌ ನೀಡಿದ ಶಾಸಕ ಬಿ.ನಾಗೇಂದ್ರ ಅವರು ಪರಿಶೀಲಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಮುಬೀನಾ ಬೀ, ಜಿ.ಶಿಲ್ಪಾ, ಕಾರ್ಯನಿರ್ವಾಹಕ ಇಂಜಿನಿಯರ್ ಖಾಜ ಮೋಹಿನಿದ್ದೀನ್ ಶಾಸಕರಿಗೆ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗೋವರ್ಧನ್ ರೆಡ್ಡಿ, ಸಿಂಧುವಾಳ ಗಾದಿಲಿಂಗನಗೌಡ, ಗುಮ್ಮನೂರ್ ಜಗನ್ನಾಥ್, ಕೆ.ಹೊನ್ನಪ್ಪ, ಅಲ್ಲಭಕಾಷ್, ನಾಗಲಕೆರೆ ಗೋವಿಂದ, ಸೋಮು, ಇಶಾಕ್, ಬಾಹುಬಲಿ, ಲೋಕೇಶ್, ಶ್ರೀನಾಥ್, ಹಗರಿ ಗೋವಿಂದ ಅನ್ವರ್, ಪರಶುರಾಮ್, ಪದ್ಮ, ಶೋಭಾ ಕಾಳಿಂಗ ಮತ್ತಿತರರು ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *