ಕೆಜಿಬಿ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದ್ರಶೇಖರಯ್ಯ ನಿಧನ :ರೇವ ಕಂಬನಿ

ಬಳ್ಳಾರಿ, ಸೆ.12: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಬಿ.ಎಂ.ಚಂದರಶೇಖರಯ್ಯ ಅವರು ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸ್ಥಳೀಯ ವಿದ್ಯಾನಗರದ 5ನೇ ಅಡ್ಡರಸ್ತೆಯಲ್ಲಿರುವ ನಿವಾಸದಲ್ಲಿ ಬಂಧು‌ಮಿತ್ರರು ಸೇರಿದಂತೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ(ರೇವ)ದ ಮುಖಂಡರಾದ ಡಾ.‌ವೆಂಕಟಯ್ಯ ಅಪ್ಪಗೆರೆ, ಗಂಗಣ್ಣ ಪತ್ತಾರ ಅವರು ಅಂತಿಮ‌ನಮನ ಸಲ್ಲಿಸಿದರು.
ಸೋಮವಾರ ಏರು ಹೊತ್ತಿನಲ್ಲಿ ನಗರದ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತಿಮ‌‌ ಸಂಸ್ಕಾರ ನೆರವೇರಿಸಲಾಯಿತು ಎಂದು ಕುಟುಂಬದ ‌ಮೂಲಗಳು ತಿಳಿಸಿವೆ.
*****

Leave a Reply

Your email address will not be published. Required fields are marked *