ಅನುದಿನ ಕವನ-೬೨೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್), ತುಮಕೂರು ಕವನದ ಶೀರ್ಷಿಕೆ:ಗಾಯ

ಗಾಯ…..!

ಗಾಯಗಳನ್ನು
ಸುಖಿಸುವುದು
ಅಭ್ಯಾಸವಾಗಬಾರದು
ಲೋಕದ ಹಿಡಿಯಲ್ಲಿ
ಸದಾ ಉಪ್ಪೇ!

ಗಾಯ ಸಲೀಸಾಗಿ
ಮಾಯುವುದಿಲ್ಲ!
ಹಾಗಂತ
ವ್ರಣವಾಗಲು
ಬಿಡಲೇಬಾರದು!

ಗಾಯ ಯಾರೂ
ಮಾಡಬಹುದು
ಅವರೆಡೆಗಿಷ್ಟು
ಕರುಣೆಯ ಪಾಲಿರಲಿ!

ಗಾಯಗಳನ್ನು ಪಾಲು
ಮಾಡಲಾಗದು
ಮದ್ದು ತರುವ ಎದೆಗಳನ್ನು
ಸಂಭ್ರಮಿಸಬೇಕು!


ಗಾಯಗಳು
ಆತ್ಮದ ರಾಗಗಳು
ನಾವು
ಬದುಕಿನ ಅನುರಾಗಿಗಳೇ ಆಗಬೇಕು!


-ರಂಹೊ (ರಂಗಮ್ಮ ಹೊದೇಕಲ್) ತುಮಕೂರು
*****

Leave a Reply

Your email address will not be published. Required fields are marked *