ಅನುದಿನ ಕವನ-೧೯೪೩, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ

ಎಲ್ಲಾರು ಮಾಡುವುದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಹಾರಾಟ ಹೋರಾಟ ಮಾಡಿಕೊಂಡು ಅನ್ಯರ ಗಮನ ಸೆಳೆಯೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಉಪವಾಸ ವನವಾಸ ನಟನೆ ಮಾಡಿಕೊಂಡು ಎಲ್ಲರ ಕಾಲು ಹಿಡಿಯೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಖಾದಿ ಪಂಚೆ ಅಂಗಿ ಟೋಪಿ ಹಾಕಿಕೊಂಡು ನಾಯಕರಂತೆ ನಟನೆ ಮಾಡೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಸತ್ತವರಿಗೆ ಅತ್ತಂತೆ ಮೊಸಳೆ ಕಣ್ಣೀರು ಹಾಕಿ ಎಲ್ಲರ ಮನ ಕರಗಿಸೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಪ್ರೀತಿಯಿಂದ ಮಾತನಾಡಿ ಬಣ್ಣದ ಕನಸ ತೋರಿ ಹಣ ಲೂಟಿ ಮಾಡೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಅವರಿವರಿಗೆ ಸಹಾಯ ಮಾಡಿ ಸುದ್ದಿ ಫೋಟೋಕಾಗಿ ಕಷ್ಟಪಡೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಹೆಂಡತಿ ಮಕ್ಳು ಅಳಿಯ ಸೊಸೆ ಮೊಮ್ಮಕ್ಳೆಲ್ಲರನ್ನು ತೋರಿಸೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಸ್ಟ್ರೖಕು ಜೖಲು ನಡಿಗೆ ಮೆರವಣಿಗೆ ಹೊಡೆಸಿ ಬಡಿಸಿಕೊಳ್ಳೋ ನಾಟಕಗಳೆಲ್ಲ ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಮನೆಲಿ ಕುಳಿತುಕೊಂಡು ಜಾತಿ ಧರ್ಮ ಅಂತ ಹೊಡೆದಾಡ್ಸೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಕಾರು ಜೀಪು ಲಾರಿ ಏರಿ ಹಿಂದೆ ಮುಂದೆ ಬೆಂಬಲಿಗರ ಕೂಡಿ ಮೆರೆಯೋದು ವೋಟಿಗಾಗಿ ವೋಟಿಗಾಗಿ ಸೀಟು ನೋಟಿಗಾಗಿ

ಸಂವಿಧಾನದ ಆಶಯಗಳನ್ನು ಮನಮುಟ್ಟಿ ಮಾಡುವುದು ಜನರಿಗಾಗಿ ಜನರ ಹಿತಕ್ಕಾಗಿ ಜನರ ಏಳ್ಗೆಗಾಗಿ

( ಇದು ಕನಕದಾಸರ ಕ್ಷಮೆಯನ್ನು ಕೋರಿ ರಚಿಸಿದ ಕೀರ್ತನೆಯ ಅಣಕವಾಡು)


-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *