ನೆರಳ ವಿರಹ
ಈ ಮುನ್ನ,
ನನ್ನ ಸ್ವಚ್ಛ ನಗುವಿಗೆ
ನೀನು ಮೋಹಿತಳಾಗಿದ್ದೆ
ಇನ್ನೇಕೆ ಹೀಗೆ ಸ್ಥಬ್ಧವಾದೆ?
ಇಷ್ಟು ದಿನಗಳ ಕಾಲ
ನಗುನಗುತ್ತಾ ಜೊತೆಯಿದ್ದು,
ಅದೆಷ್ಟು ಬೇಗನೆ
ದೂರ ಸರಿದು ಹೋದೆ?
ಎಷ್ಟು ಸುಂದರವಾಗಿದ್ದವು
ನಾವು ಅಲೆದಾಡಿದ ಆ
ಸ್ಥಳಗಳು,ದಿನಗಳು,
ಅದೆಂಥ ಸನ್ನಿವೇಶ?
ಪ್ರೀತಿಯ ಪಯಣಕ್ಕೆ
ಅದೆಷ್ಟು ತೀವ್ರ ವಿದಾಯ ಹೇಳಿದೆ!
ಇಷ್ಟು ದಿನಗಳ ಕಾಲ
ನನ್ನೆದೆಯ ಆಳಕ್ಕಿಳಿದು
ಅನಂತತೆಯನ್ನು ತಲುಪಿದ್ದೆ,
ಅದೆಷ್ಟು ಬೇಗನೆ
ನೆನಪಾಗಿ ಅಳಿದುಹೋದೆ?
ನೀನಿರುವ ತನಕ
ಬಿರು ಬಿಸಿಲೂ ಹೂಬಿಸಿಲಾಗುತ್ತಿತ್ತು…
ಈಗ ಮೃದು ಕನಸುಗಳನ್ನು ತುಳಿದು,
ನಿರ್ಜನ ಹಾದಿಯಲ್ಲಿ ಅದೇಕೆ ಬಿಟ್ಟುಹೋದೆ?
-ಶರಣಪ್ಪ ತಳ್ಳಿ ಕುಪ್ಪಿಗುಡ್ಡ
