ಅನುದಿನ ಕವನ-೬೪೬, ಕವಯತ್ರಿ: ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ನೀರು, ನಭ ಮತ್ತು ನಗು

ನೀರು, ನಭ ಮತ್ತು ನಗು

ಎಷ್ಟೊಂದು ನೀರು ಅದು
ತಣಿಸುವುದು ದಣಿಯದೆ, ನಿಜತಾನೆ

ಎಷ್ಟು ಎತ್ತರದ ಅಕಾಶ
ದಿಗಂತದಲಿ ಕೈಗೆಟುಕುವ ಅದು
ನೋಟಕ್ಕದರೂ ದಿಟವೇನೇ

ಎಷ್ಟೊಂದು ನಗು ಇದು
ಮರೆಮಾಚುವುದು ಮನಸನು,

ನದಿ ಮುಚ್ಚುವಂತೆ ಆಳವನು
ನಭ ನೆಚ್ಚುವಂತೆ ನೀಲವನು
ನಕ್ಕುಬಿಡು ಒಮ್ಮೆ ನಿನ್ನ ನೋವನು

-ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ
*****

Leave a Reply

Your email address will not be published. Required fields are marked *