ಕೊಪ್ಪಳ: ಜಿಲ್ಲಾ ವಾರ್ತಾಧಿಕಾರಿಯಾಗಿ ಗವಿಸಿದ್ಧ ಬಿ. ಹೊಸಮನಿ ಅಧಿಕಾರ ಸ್ವೀಕಾರ

ಕೊಪ್ಪಳ, ಅ. 9: ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆಯ
ಸಹಾಯಕ ನಿರ್ದೇಶಕರಾಗಿ ಗವಿಸಿದ್ದ ಬಿ.ಹೊಸಮನಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.


ಗವಿಸಿದ್ಧ ಬಿ.ಹೊಸಮನಿ ಅವರು ಈ ಹಿಂದೆ ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಿ.ವಿ.ತುಕಾರಾಂರಾವ್ ಅವರು ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಗವಿಸಿದ್ಧ ಹೊಸಮನಿ ಅವರು ವಹಿಸಿಕೊಂಡರು. ಕಚೇರಿಯ ಸಿಬ್ಬಂದಿಯವರು ಗವಿಸಿದ್ಧ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು.
*****

Leave a Reply

Your email address will not be published. Required fields are marked *