ಕವಯತ್ರಿ ರೇಣುಕ ರಮಾನಂದರ ‘ಸಂಬಾರ ಬಟ್ಟಲು ಕೊಡಿಸು’ ಕೃತಿಗೆ ಸಂಗಂ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ

ಬಳ್ಳಾರಿ, ಅ.೨೨: ಕವಯತ್ರಿ, ಅಧ್ಯಾಪಕಿ ರೇಣುಕಾ ರಮಾನಂದ ಅವರ ಸಂಬಾರ ಬಟ್ಟಲು ಕೊಡಿಸು ಕೃತಿಗೆ 2022ರ ಸಂಗಂ ಸಾಹಿತ್ಯ ಪುರಸ್ಕಾರ ಲಭಿಸಿತು.
ನಗರದ ಬಿಐಟಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದ ಎರಡನೇ ದಿನವಾದ ಶನಿವಾರ ಸಂಜೆ ಸಮ್ಮೇಳನದ ಸಂಯೋಜಕ ಡಾ. ಹೆಚ್ ಎಸ್ ಶಿವಪ್ರಕಾಶ್ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಪ್ರಶಸ್ತಿ 25ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ. ಒಟ್ಟು 140 ಕೃತಿಗಳಲ್ಲಿ ಸಂಬಾರ ಬಟ್ಟಲು ಕೊಡಿಸು ಕೃತಿ ಆಯ್ಕೆಯಾಗಿದೆ.
2021ನೇ ಸಾಲಿನ ವಿಭಾ ಪ್ರಶಸ್ತಿಗೂ ಸಂಬಾರ ಬಟ್ಟಲು ಕೊಡಿಸು ಕೃತಿ ಆಯ್ಕೆಯಾಗಿತ್ತು.
*****

Leave a Reply

Your email address will not be published. Required fields are marked *