Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಮಂತ್ರಾಲಯದಲ್ಲಿ ಡಿ.25ರಂದು ಕಚುಸಾಪ 4ನೇ ಅ.ಭಾ. ಸಾ ಸಮ್ಮೇಳನ - Karnataka Kahale

ಮಂತ್ರಾಲಯದಲ್ಲಿ ಡಿ.25ರಂದು ಕಚುಸಾಪ 4ನೇ ಅ.ಭಾ. ಸಾ ಸಮ್ಮೇಳನ

ಹುಬ್ಬಳ್ಳಿ, ಅ.30:  ಹುಬ್ಬಳ್ಳಿಯ ಕರ್ನಾಟಕ ಚುಟುಕು ಸಾಹಿತ್ಯ ಪತಿಷತ್ತಿನ  ಅಖಿಲಭಾರತ ನಾಲ್ಕನೆಯ ಸಮ್ಮೇಳನ ಡಿ. ೨೫ ರಂದು ಆಂದ್ರಪ್ರದೇಶದ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಜರುಗಲಿದೆ ಎಂದು ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ವೇದಾಂತ ಪಂಡಿತರಾದ ಡಾ.ರಾಜಾ ಎಸ್.ಗಿರಿ ಆಚಾರ್ಯ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಅವರು ೫೦ ಕ್ಕೂ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಂತ್ರಾಲಯ ಮಠದ ಡಾ.ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಾನಿಧ್ಯ ವಹಿಸುವರು. ದಶಮಾನೋತ್ಸವ ಸಂಭ್ರಮದ ಸಮಾರೋಪ ಅಂಗವಾಗಿ ಕವಿಗೋಷ್ಟಿ‌ ಏರ್ಪಡಿಸಲಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*****