ಅನುದಿನ ಕವನ-೧೯೯೨, ಕವಿ: ರಾಗಂ, ಬೆಂಗಳೂರು

ಹೀಗೆ ಕಾಡಿದವರು ‘ ನಾನಾ’ ನಮ್ಮನ್ನು
ಧ್ಯಾನಸ್ಥರಾಗಿಯೆ ನೋಡಿದರು ಜಗವನ್ನು

ನಡೆಯುವ ದಾರಿ ಇನ್ನೂ ದೀರ್ಘವಾಗಿತ್ತು ಗೋರಿಗೆ
ಹೊರಟೆ ಬಿಟ್ಟಿರು ನೆಲೆ ಇಲ್ಲದ ಊರಿಗೆ

ಅದೇನು ಅವಸರವೊ,ಅದ್ಯಾವ ಬೇಸರವೊ
ನುಡಿ ನಿಲ್ಲಿಸಿಬಿಟ್ಟರು,ನಡೆ ಗೆಲ್ಲಿಸಿ ಬಿಟ್ಟರು

ಈಗ ಎಲ್ಲವೂ ‘ಖಾಮೋಶ…..’

ಹೋಗಬೇಕಾದವರು ಅಲ್ಲ ಅವರು
ಹೋಗಿ ಬಾ ಎಂದು ಹೇಗೆ ಹೇಳುವುದು ಊರು

ಹೇಳಬಹುದು ಇಷ್ಟೇ..
ಸಾಧನೆಯ ಬೆಟ್ಟವನೇರಿ ಸಾರ್ಥರಾದವರು ನೀವು
ವ್ಯರ್ಥ ಹೀಗೆಯೇ ಬದುಕಿದ್ದೇವೆ ನಾವು …….

🙏’ನಟ ಸಾಮ್ರಾಟ’ನಿಗೆ ಅಂತಿಮ ನಮನಗಳು🙏

-ರಾಗಂ (ರಾಜಶೇಖರ ಜಿ.‌ಮಠಪತಿ), ಬೆಂಗಳೂರು

Leave a Reply

Your email address will not be published. Required fields are marked *