ಅನುದಿನ ಕವನ-೭೧೧, ಹಿರಿಯ ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ನಮ್ಮ ಕನ್ನಡ

ನಮ್ಮ ಕನ್ನಡ

ಕನ್ನಡ ಕನ್ನಡ ಕನ್ನಡ
ನಮ್ಮ ಹೆಮ್ಮೆಯ ಕನ್ನಡ
ನುಡಿಯಲು ಚಂದ ಸುಂದರ ಕನ್ನಡ
ಕೇಳಲು ಚಂದ ಅಂದದ ಕನ್ನಡ
ಕಾಡಲಿ ನಡೆಯಲು ಸಿರಿಗಂಧದ ಕನ್ನಡ
ತೋಟ ಪಟ್ಟೆಗಳಲಿ ಸೌಗಂಧದ ಕನ್ನಡ
ದಾರಿಯ ನಡುವೆ ಹರಿದಾಡುವ ಕನ್ನಡ
ವೇದಿಕೆ ಮೇಲೆ ಮೆರೆಯುವ ಕನ್ನಡ
ತಾಯಿಯ ಮಡಿಲಲಿ ಮಮತೆಯ ಕನ್ನಡ
ತಂದೆಯ ದುಡಿತದ ತುಡಿತವು ಕನ್ನಡ
ಅಜ್ಜಿಯ ಬಾಯಲಿ ಅಕ್ಕರೆ ಕನ್ನಡ
ಮಕ್ಕಳ ಬಾಯಲಿ ಸಕ್ಕರೆ ಕನ್ನಡ

ಆದಿಕವಿ ಪಂಪನ ಕನ್ನಡ
ರನ್ನ ಜನ್ನ ಪೊನ್ನರ ಕನ್ನಡ
ಕುವೆಂಪು ಅವರ  ಹೊಸಗನ್ನಡ
ಬೇಂದ್ರೆ ಯವರ ಗ್ರಾಮೀಣ ಕನ್ನಡ
ಈಗಿನ ಕವಿಗಳ ಮೆಚ್ಚಿನ ಕನ್ನಡ
ಕನ್ನಡ ಕನ್ನಡ ಕನ್ನಡ
ನಮ್ಮ ಹೆಮ್ಮೆಯ ಕನ್ನಡ!

-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ

Leave a Reply

Your email address will not be published. Required fields are marked *