ಬಿ ಎಸ್ ದಾದ ಅಮೀರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ ಪ್ರದಾನ

 

ಬಳ್ಳಾರಿ, ಡಿ.12: ಜಿಲ್ಲಾ ಸಶಸ್ತ್ರ ಪಡೆ(ಡಿಎಆರ್)ಯ ಎಹೆಚ್ ಸಿ, ಬಿ ಎಸ್ ದಾದ ಅಮೀರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ  ಪೊಲೀಸ್ ಪದಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಪ್ರದಾನ ಮಾಡಿದರು.
ಭಾನುವಾರ ಬೆಂಗಳೂರಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ಪ್ರದಾನ‌ಮಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸ್ತುತ ನಗರದ ಐಜಿಪಿ ಕಚೇರಿಯಲ್ಲಿ ದಾದ ಅಮೀರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
*****

Leave a Reply

Your email address will not be published. Required fields are marked *