Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೭೩೪, ಕವಿ:ಸಾಹೇಬಗೌಡ ಯ ಬಿರಾದಾರ, ತಾಳಿಕೋಟಿ, ಶಿಶುಗೀತೆ: ಅಜ್ಜೋರ ಇದ್ದರು ಅಜ್ಜೋರು - Karnataka Kahale

ಅನುದಿನ ಕವನ-೭೩೪, ಕವಿ:ಸಾಹೇಬಗೌಡ ಯ ಬಿರಾದಾರ, ತಾಳಿಕೋಟಿ, ಶಿಶುಗೀತೆ: ಅಜ್ಜೋರ ಇದ್ದರು ಅಜ್ಜೋರು

ಶಿಶುಗೀತೆ:
ಅಜ್ಜೋರ ಇದ್ದರು ಅಜ್ಜೋರು

ಅಜ್ಜೋರ ಇದ್ದರು ಅಜ್ಜೋರು
ಶ್ರೀ ಸಿದ್ದೇಶ್ವರ ಅಜ್ಜೋರು//ಪ/

ಅವರು ನಡೆದಾಡುವ ದೇವರು/
ನಗುತ ನಲಿವು ತಂದವರು/
ನಾಡಿಗೆ ಬೆಳಕು ಎಂದವರು/
ನಾಡೆ ಬೆಳಗಿ ಹೋದವರು‌/೧/

ಬೆಳ್ಳನೆ ಬಟ್ಟಿ ತೊಟ್ಟವರು/
ಜೇಬಿಲ್ಲದಂಗಿ ಉಟ್ಟವರು/
ಕಾಸಿಲ್ಲದೆ ಕೆಲಸ ಮಾಡಿದರು/
ಕೈಲಾಸವೆ ತಮ್ಮಲಿ ತಂದವರು/೨/

ಬೇಕು ಬೇಡಗಳ ಸುಟ್ಟವರು/
ಧ್ಯಾನದಲಿ ದಿನ ಇದ್ದವರು/
ಜಗಕೆ ಜ್ಞಾನವ ಕೊಟ್ಟವರು/
ಬೆಳಕಿನ ಹೆಜ್ಜಿ ಇಟ್ಟವರು/೩/

ನಿರ್ಭಾವದಿ ಸದಾ ಇದ್ದವರು/
ಭಾವದ ಬದುಕ ತಂದವರು/
ಸದ್ಧರ್ಮವನು ಹೇಳಿದರು/
ಸತ್ಯದ ಮಾರ್ಗದಿ ನಡೆದಿಹರು/೪/

ಪ್ರವಚನ ಸಾರವ ತಿಳಿಸಿಹರು/
ಪರಪಂಚಕೆ ದಾರಿ ತೋರಿದರು/
ಎಲ್ಲವು ಇಲ್ಲವೋ ಎಂದವರು/
ಬಯಲಲಿ ಬಯಲ ಆಗಿಹರು/೫/

-ಸಾಹೇಬಗೌಡ ಯ ಬಿರಾದಾರ, ತಾಳಿಕೋಟಿ
*****