ಅನುದಿನ‌ ಕವನ-೭೬೭, ಪ್ರೇಮಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ:ನಾನು ಬರೆಯುವ ಕವಿತೆ ನಿನಗಾಗಿಯೆ

ನಾನು ಬರೆಯುವ ಕವಿತೆ ನಿನಗಾಗಿಯೆ

ನನ್ನ ಕವಿತೆಯಲ್ಲಿ ಹೊಗಳುವುದು ನಿನ್ನನ್ನೆ
ನನ್ನ ಕವಿತೆಯಲ್ಲಿ ಬಯಸುವುದು ನಿನ್ನನ್ನೆ
ನನ್ನ ಕವಿತೆಯಲ್ಲಿ ಕನವರಿಸುವುದು ನಿನ್ನನ್ನೆ
ನನ್ನ ಕವಿತೆಯಲ್ಲಿ ಕಾವ್ಯಕನ್ನಿಕೆಯಾಗಿಸುವುದು ನಿನ್ನನ್ನೆ
ನನ್ನ ಕವಿತೆಯಲ್ಲಿ ಸಮ್ಮೊಹಿಸುವುದು ನಿನ್ನನ್ನೆ
ಆದರೂ ಚಲುವಿ ನೀನು ನಾನು ಯಾರು ಯಾರಿಗೆಲ್ಲಾ  ಕವಿತೆ ಬರೆಯುವೆನಂದು
ಸವತಿ ಮತ್ಸರ ಹೊಂದಲಿಯೆಂದು
ನಿನ್ನ ಅರಿವಿಗೂ ಬಾರದ ನಿನ್ನ ಗುಣಗಳ
ನೀನೆ ಅರಿಯದ ನಿನ್ನತನವ ಒಂದಿಷ್ಟು ಅರಳಿಸಿ
ನಿನ್ನ ಹೊಳಪ ಒಂದಿಷ್ಟು ಹೊಳೆಯಿಸಿ
ನಿನ್ನ ತೂಕವ ಒಂದಿಷ್ಟು ಕರಗಿಸಿ
ಬರೆಯುತಲಿರುವೆ ಕವಿತೆಗಳ
ಗೊತ್ತಲ್ಲಾ ನನ್ನ ಮನಂ ಕಾವ್ಯಕನ್ನಿಕೆ
ನೀನೆ ಮನದೊಳಿರಲಾರದ ಕಾವ್ಯಕನ್ನಿಕೆ.

– ಮನಂ, ಬೆಂಗಳೂರು
*****

Leave a Reply

Your email address will not be published. Required fields are marked *