ಅನುದಿನ ಕವನ-೭೯೩, ಕವಿಯಿತ್ರಿ: ಮಧುಮತಿ (ಮಲ್ಲಮ್ಮ ರಮೇಶ್ ಪಾಟೀಲ್) ಬಳ್ಳಾರಿ, ಕವನದ ಶೀರ್ಷಿಕೆ: ಚಂದಿರನಾಟ

ಚಂದಿರನಾಟ

ಹುಣ್ಣಿಮೆಯ ಬೆಳದಿಂಗಳು
ಚೆಲ್ಲುತಿದೆ ಬೆಳಕನ್ನು
ಕಣ್ಣುಗಳು ನಿದಿರೆಯೊಳು
ಕಾಣುತಿದೆ ಕನಸನ್ನು

ಚೆಂದಿರನ ಆಗಮನ
ತಂಪಾದ ಗಾಳಿಯಲಿ
ಸೌಂದರ್ಯದಾಗಮನ
ಶಶಿಮೂಡೊ ಬೆಳಕಿನಲಿ

ಭೂರಮೆಯ ಸಿರಿಮೊಗವು
ಹೊನ್ನಂತೆ ಮಿಂಚುತಲಿ
ತಂಗಾಳಿಗೆ ಅನುಭವವು
ಹಸಿರೆಲ್ಲ ಸವಿಯುತಲಿ

ಸ್ವರ್ಗದಾ ಭುವಿಯೊಳಗೆ
ಚಂದಿರಗೆ ಕಣ್ಬೆಳಕು
ಭೂರಮೆಯ ಮಡಿಲೊಳಗೆ
ತುಂಬಿಹುದು ಚೆಂಬೆಳಕು

-ಮಧುಮತಿ(ಮಲ್ಲಮ್ಮ ರಮೇಶ್ ಪಾಟೀಲ್)
ಬಳ್ಳಾರಿ

Leave a Reply

Your email address will not be published. Required fields are marked *