ಅನುದಿನ ಕವನ-೭೯೪, ಯುವ ಕವಿ: ಶಕ್ತಿರತ್ನಂ ವಿನಯರಾಜ್ ಇಟಿಗಿ, ಹೂವಿನ ಹಡಗಲಿ ತಾ. ಕವನದ ಶೀರ್ಷಿಕೆ: ಬೆನ್ನಿಗಂಟಿದ ನೆನಪು

ಬೆನ್ನಿಗಂಟಿದ ನೆನಪು

ಬೆನ್ನಿಗೆ ಅಂಟಿದ ನೆನಪು
ಮೂಡುತಿದೆ ಆಗೊಮ್ಮೆ ಈಗೋಮ್ಮೆ
ಬಾಲ್ಯದ ನೆನಪುಗಳ ಸೋನೆ!
ಯೌವ್ವನದ ನೆನಪುಗಳ ಬೇನೆ!

ಕಾಗದದ ದೋಣಿಯಂತೆ ಜೀವದ
ಚಲನ ವಲನ ತೇಲುವುದೇ ತಡ
ಮುಳಗೇಳುವುದೇ ಅದರ ಲಕ್ಷಣ
ಕ್ಷಣ ಕಾತುರ ಕ್ಷಣ ಆತುರ ಆಗದಿರಲಿ ವಿಲಕ್ಷಣ|

ಮುಂದೆ ಸಾಗು ಮುಂದೆ ಸಾಗು
ಮಂದಿಗೊಂದಿಗೆಯೊಂದಿಗೆ ನಿಲ್ಲದಿರು ಜೋಕೆ!
ಆಲಕ್ಷಿಸುವವರು ಉಪೇಕ್ಷಿಸುತಿರುವರು ಗೆದ್ದು ನಿಲ್ಲು!
ಸಂಪರ್ಕಿಸಲು ಆಕರ್ಷಿಸಲು ನಿಲ್ಲುವರು ಸುತ್ತಲು!


-ಶಕ್ತಿರತ್ನಂ ವಿನಯರಾಜ್ ಇಟಿಗಿ, ಹೂವಿನ ಹಡಗಲಿ ತಾ.
*****

Leave a Reply

Your email address will not be published. Required fields are marked *